Ajeya Kannada Daily

AJEYA KANNADA DAILY

ಅಜೇಯ ಕನ್ನಡ ದಿನಪತ್ರಿಕೆ

About Ajeya

I am M. Srinivasan, Editor and Publisher of AJEYA Kannada daily, upstairs: sri Venkatesha Sweet House, near AA Circle, BH road, Shivamogga, Karnataka.

Since 30 years I am in the field of Journalism. I am very much believed in news and articles to be published on the basis of "As it is" and "Where it is". We never allow to publish anything which is biased in nature. We welcome always news in True sense.

We have the strong network for news gathering. We prefer fresh news to be published which happens to be. We are proud to say that our Kannada daily has household name in Shivamogga, Chickmagaluru, Chitradurga and Davanagere Districts particulary and also in Bangalore.

We OFFER, PREFER and PRACTICE Development Journalism.


If anybody wants more information, contact my Mob. No. 99019 53114.

ಅಜೇಯ ಬಗ್ಗೆ

ಋತಸ್ಯ ಧೀತಿರ್ ವ್ಯಜಿನಾನಿ ಹಂತಿ.

ಋತದ ಪಕ್ಷವನ್ನು ಒಪ್ಪಿ ಅನುಸರಿಸುವುದಷ್ಟೇ ನಮ್ಮ ಕರ್ತವ್ಯ. ಸುಳ್ಳಿನ ನಾಶವು ಧೀತೇಜದಿಂದ ತಾನಾಗಿ ನೆರವೇರುತ್ತದೆ.

We Offer Development Journalism.

ನಮ್ಮ ಪತ್ರಿಕಾ ಧ್ಯೇಯ ಅಭಿವೃದ್ಧಿ. ರಾಷ್ಟ್ರ, ಸದ್ವಿಚಾರ, ಸತ್ಕ್ರಿಯೆ, ಸದಾಚಾರ ಎಲ್ಲದರ ಸರಿಗಮನ.

- ಈ ಎರಡು ಧ್ಯೇಯವಾಕ್ಯಗಳೊಂದಿಗೆ 'ಅಜೇಯ' ಎಂಬ ವಿಧಿನಾಮವನ್ನೇ ಹೊಂದಿ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿರುವ ನಮಗೆ, ಸಂಸ್ಕೃತಿವಂತ ಮನಸ್ಸುಗಳ ಎಲ್ಲ ಬಗೆಯ ಸಹಯೋಗ, ಸಹಕಾರ, ಸಹಭಾಗಿತ್ವವೂ ಬೇಕು. ಅದೆಲ್ಲವೂ ಧಾರಾಳವಾಗಿ ದೊರೆಯುವುದೆಂಬ ನಂಬಿಕೆಯೂ ನಮ್ಮಲ್ಲಿ ಅಚಲವಾಗಿದೆ.

ಐದು ವರ್ಷಗಳಿಂದ ಶಿವಮೊಗ್ಗ ಭಾಗದಲ್ಲಿ, ನಂತರ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚಿನ ಹೆಸರು ಮಾಡಿರುವ ಅಜೇಯ ಪತ್ರಿಕೆ 2019ರ ಆಗಸ್ಟ್ ತಿಂಗಳಿಂದ ಬೆಂಗಳೂರಿನಲ್ಲೂ ಪ್ರಕಟವಾಗುತ್ತಿದೆ. ಒಂದು ಸಂಜೆ ಪತ್ರಿಕೆ ಇಷ್ಟು ಸಜ್ಜನಿಕೆಯೊಂದಿಗೆ ಪ್ರಕಟಗೊಳ್ಳುವ ಬಗ್ಗೆ ಸರ್ವತ್ರ ಮೆಚ್ಚುಗೆ, ಆದರಗಳು ವ್ಯಕ್ತವಾಗಿವೆ.

ಅಜೇಯ ಸಂಜೆ ದಿನಪತ್ರಿಕೆ ಕೇವಲ ಇನ್ನೊಂದು ಪತ್ರಿಕೆಯ ರೂಪದಲ್ಲಿ ಉದ್ಯಮ ಮಾಡಲು ಹೊರಟಿಲ್ಲ. ಪತ್ರಿಕೆಯನ್ನೊಮ್ಮೆ ವೀಕ್ಷಿಸಿದರೇ ಅದು ವೇದ್ಯವಾಗುವ ವಿಚಾರ. ಜೊತೆಗೆ ಸಾಂಸೃತಿಕ ಅಗತ್ಯಗಳನ್ನು ಪೂರಕ ರೀತಿಯಲ್ಲಿ ನಿರ್ವಹಿಸಲು 'ಅಜೇಯ ಸಂಸ್ಕೃತಿ ಬಳಗ' ಎಂಬ NGO ಒಂದನ್ನೂ ನಡೆಸಿಕೊಂಡು ಬರುತ್ತಿದೆ. ಅದರ ಮೂಲಕ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಿ, ಸಾಮಾಜಿಕವಾಗಿ ಕ್ರಿಯಾಶೀಲವಾಗಿದೆ. ಇದರೊಂದಿಗೆ ಪುಸ್ತಕಗಳನ್ನು ಆಸಕ್ತರಿಗೆ ತಲುಪಿಸಲಿಕ್ಕಾಗಿ 'ಅಜೇಯ ಬುಕ್ ನೂಕ್' ಎಂಬ ಇನ್ನೊಂದು ಪುಟ್ಟ ಮಾದರಿ ವ್ಯವಸ್ಥೆಯನ್ನೂ ಹೊಂದಿದೆ.

ಎಲ್ಲರಿಗೂ ತಿಳಿದಂತೆe paper ಇದೆ, web ಆವೃತ್ತಿ ಇದೆ. facebook, twitter ಖಾತೆಗಳೂ ಇವೆ. ಇವೆಲ್ಲವನ್ನೂ ಹೊಂದಿರುವ ಒಂದು ಪತ್ರಿಕೆ ಜಿಲ್ಲಾ ಮಟ್ಟದಿಂದ ಬೆಳೆದಂಥದು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಬಹುಶಃ ಇಂಥ ಸಾಹಸ ಜಿಲ್ಲಾಮಟ್ಟದ ಪತ್ರಿಕೆಗಳ ವಾಪ್ತಿಯಲ್ಲಿ ಇದೇ ಪ್ರಥಮವೂ ಇರಬಹುದು.

ಹೀಗೆ ತನ್ನದೇ ಆದ ಧ್ಯೇಯೋದ್ದೇಶಗಳನ್ನು ಹೊಂದಿ ಹೊರಬರುತ್ತಿರುವ ಅಜೇಯ ಸಂಜೆ ದಿನಪತ್ರಿಕೆಯ ಸಂಪಾದಕರು ಎಂ. ಶ್ರೀನಿವಾಸನ್. ಮೂರು ದಶಕಗಳಿಗೂ ಹೆಚ್ಚಿನ ಪತ್ರಿಕೋದ್ಯಮದ ಅನುಭವ, ಓದು ಬರೆಹಗಳ ಒತ್ತಾಸೆ ಹೊಂದಿ ಅಸ್ಖಲಿತ ರಾಷ್ಟ್ರೀಯ ದೃಷ್ಟಿಕೋನದೊಡನೆ ಪತ್ರಿಕೆಯನ್ನು ಹೊರತರುತ್ತಿರುವವರು. ಎಡ ಅಥವಾ ಬಲಪಂಥವಾವುದಕ್ಕೂ ಸೇರದ ಇವರ ಭಾರತೀಯ ನಿಲುವು ಯಾವಾಗಲೂ ಪ್ರಶಂಸೆಯನ್ನು ಪಡೆದಂಥದು. ಪತ್ರಿಕೋದ್ಯಮದಲ್ಲಿ ಈ ರೀತಿಯಾಗಿ ಖಚಿತವಾದ ನಿಲುಮೆಗಳನ್ನು ಹೊಂದಿದ ವ್ಯಕ್ತಿಗಳು ಅಪರೂಪ.