ಚಾಮರಾಜನಗರ,ಫೆ.22
ಮನುಷ್ಯನ ಕಷ್ಟ-ಸುಖಗಳಿಗೆ ಸ್ಪಂದಿಸಿದಾತ ನಿಜವಾದ ಮನುಷ್ಯನಾಗುತ್ತಾನೆ. ಇದೇ ತತ್ವ, ಆದರ್ಶಗಳನ್ನು ಎಲ್ಲಾ ದಾರ್ಶನಿಕರು, ಸಂತರು ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸರಳವಾಗಿ ಆಚರಿಸಲಾದ ಛತ್ರಪತಿ ಶಿವಾಜಿ, ಸಂತಕವಿ ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸದಲ್ಲಿ ಮಹಾದಾರ್ಶನಿಕರೆಂದು ಅನುಸರಿಸಲ್ಪಡುವವರು ಯಾರೂ ಸಮಾಜ ಉದ್ಧಾರ ಮಾಡುವ ಉದ್ದೇಶದಿಂದ ಬಂದವರಲ್ಲ. ಆದರೆ ಸಾಮಾನ್ಯರಂತೆ ನಿರ್ಲಿಪ್ತರಾಗದೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ಅದನ್ನು ಸರಿಪಡಿಸಲು ಹೋರಾಟ ನಡೆಸಿದ್ದರಿಂದ ಅವರು ಮಹಾನ್ ವ್ಯಕ್ತಿಗಳಾಗಿದ್ದಾರೆ. ವೈಯಕ್ತಿಕ ಆಸಕ್ತಿಗಳಿಗಿಂತ ಸಮಾಜದ ಏಳ್ಗೆಯನ್ನೇ ತಮ್ಮ ಜೀವನದ ಸಿದ್ಧಾಂತವಾಗಿಸಿ ಬದುಕಿದ್ದಾರೆ. ಇಂತಹ ಮಹನೀಯರ ಉದಾತ್ತ ಪರಂಪರೆಯೇ ಮನುಕುಲದ ಭವಿಷ್ಯದ ದಾರಿದೀಪವಾಗಿದೆ ಎಂದು ಜಿಲ್ಲಾಽಕಾರಿ ತಿಳಿಸಿದರು.
ಸಂತಕವಿ ಸರ್ವಜ್ಞರ ಬಗ್ಗೆ ತಿಳಿಯದೆ ಇರುವವರು ಬಹುಶಃ ಯಾರೂ ಇರಲಿಕ್ಕಿಲ್ಲ. ಅಷ್ಟರಮಟ್ಟಿಗೆ ಸರ್ವಜ್ಞರ ಆದರ್ಶಗಳು ಪ್ರತಿಯೊಬ್ಬರಲ್ಲೂ ಅನುಸಂಧಾನಗೊAಡಿವೆ. ಅಂತೆಯೇ ಛತ್ರಪತಿ ಶಿವಾಜಿ ಭಾರತ ದೇಶದ ಅಸ್ಮಿತೆ ಎತ್ತಿ ಹಿಡಿದ ಹೋರಾಟಗಾರ. ರಾಷ್ಟçದ ರಾಜಕೀಯ, ಸಾಂಸ್ಕÈತಿಕ ಇತಿಹಾಸವನ್ನು ಶ್ರೀಮಂತಗೊಳಿಸಿದವರಲ್ಲಿ ಶಿವಾಜಿ ಕೂಡ ಒಬ್ಬರಾಗಿದ್ದಾರೆ. ಇದೇ ರೀತಿಯಲ್ಲಿ ದಲಿತ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು. ಇಂಥಹ ಮಹಾದಾರ್ಶನಿಕರ ಹೋರಾಟ, ಬದುಕು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಪ್ರತಿಯೊಬ್ಬರೂ ಸಮಾಜದಿಂದ ಸಾಕಷ್ಟು ಪಡೆದಿರುತ್ತಾರೆ. ಅದನ್ನು ಮರಳಿ ಸಮಾಜಕ್ಕೆ ನೀಡುವ ಕರ್ತವ್ಯ ಎಲ್ಲರದ್ದೂ ಆಗಿರುತ್ತದೆ. ಹೀಗಾಗಿ ಎಲ್ಲರನ್ನೂ ಒಳಗೊಂಡು ಬದುಕುವ ರೀತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ವೈಮನಸ್ಸುಗಳನ್ನು ತೊರೆದು ಪ್ರೀತಿ ಹಂಚುವುದರ ಮೂಲಕ ಒಗ್ಗಟ್ಟಿನಿಂದ ಬಾಳಬೇಕು. ಆಗಲೇ ಮಾನವತವಾದಿಗಳ ಜಯಂತಿ ಆಚರಣೆಗೆ ನಿಜವಾದ ಸಾರ್ಥಕತೆ ದೊರೆಯುತ್ತದೆ ಎಂದು ಜಿಲ್ಲಾಽಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳು ನೆರೆ-ಪ್ರವಾಹಕ್ಕೆ ತುತ್ತಾದ ಕಾರಣ ಛತ್ರಪತಿ ಶಿವಾಜಿ, ಸಂತಕವಿ ಸರ್ವಜ್ಞ ಹಾಗೂ ದಲಿತ ವಚನಕಾರರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಅರಕಲವಾಡಿ ನಾಗೆಂದ್ರ, ನಿಜಧ್ವನಿ ಗೋವಿಂದರಾಜು, ಮದ್ದೂರು ವಿರೂಪಾಕ್ಷ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಕೆ. ಗಿರೀಶ್, ಮುಖಂಡರಾದ ರಾಜೇಂದ್ರ, ಚಾಮರಾಜು, ಶಿವಣ್ಣ, ರಮೇಶ್, ವೆಂಕಟರಾವ್ ಸಾಠೆ, ಕೆ.ಎಂ. ನಾಗರಾಜು, ಜಿ. ಬಂಗಾರು, ಆಲೂರು ಮಲ್ಲು, ಕದಂಬ ಅಂಬರೀಶ್, ಸೋಮಶೇಖರ್ ಬಿಸಲವಾಡಿ, ಸಿ.ಎಂ. ನರಸಿಂಹಮೂರ್ತಿ, ಗು. ಪುರುಷೋತ್ತಮ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©