ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಿಎಎ ವಿರೋಧಿ ಸಭೆಯಲ್ಲಿ ಪ್ರಚೋದನಕಾರಿ, ಹಿಂದೂ ಸಮುದಾಯದ ವಿರುದ್ಧ ಮಾಡಿದ ಟೀಕೆಗಾಗಿ ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹದುಲ್ ಮುಸ್ಲೀಮೀನ್ (ಎಐಐಎಂ) ನಾಯಕ ವಾರಿಸ್ ಪಠಾಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ವಕೀಲರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಐಎಂಐಎಂ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಫೆ.15ರಂದು ನಗರದಲ್ಲಿ ನಡೆದ ಸಭೆಯಲ್ಲಿ ಎಐಎಂಐಎಂ ನಾಯಕ ತಮ್ಮ ಭಾಷಣದಲ್ಲಿ ದೇಶದ 15 ಕೋಟಿ ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯ ಒಗ್ಗಟ್ಟಿನಿಂದ ನಿಂತರೆ 100 ಕೋಟಿ ಹಿಂದೂ ಸಮುದಾಯವನ್ನು ಮಟ್ಟ ಹಾಕಬಹುದು ಎಂದೂ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪಾಕೀಸ್ಥಾನ ಪರವಾಗಿ ಘೋಷಣೆ ಕೂಗಿರುವುದು ದುರದೃಷ್ಟಕರ. ಅದು ಕೂಡಾ ಫ್ರೀಡಂ ಪಾರ್ಕ್ನಂತಹ ಪವಿತ್ರ ಸ್ಥಳದಲ್ಲಿ ಕೂಗಲಾಗಿದೆ. ಅಮೂಲ್ಯಗೆ ಕಾರ್ಯಕ್ರಮ ಆಯೋಜಕರು ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಅವಳ ಕೈಯಲ್ಲಿ ಮೈಕ್ ಹೇಗೆ ಬಂತು ? ಕೆಲವು ದೇಶದ್ರೋಹ ಸಂಘಟನೆಗಳ ಜೊತೆಗೆ ಯುವ ಜನಾಂಗ ಕೈ ಜೊಡಿಸುತ್ತಿರುವುದು ವಿಷಾದನೀಯ. ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
- ಸಿ.ಸಿ.
ಪಾಟೀಲ್,
ಸಚಿವ
Designed, Developed and Maintained by PRABHAT SERVICES ™  , AJEYA KANNADA DAILY 2019 ©