ಬೀಜಿಂಗ್,ಫೆ.22
ಚೀನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ 2345 ಜನರು ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಚೀನಾದ 31 ಪ್ರಾಂತ್ಯಗಳಲ್ಲಿ ಸೋಂಕಿತರ ಸಂಖ್ಯೆ 76,288ರಷ್ಟಿದೆ. ಈ ಪೈಕಿ 53,284 ಜನರು ಇನ್ನೂ ಗುಣಮುಖರಾಗಿಲ್ಲ. 11,477 ಜನರ ಸ್ಥಿತಿ ಗಂಭೀರವಾಗಿದ್ದು 2,345 ಜನರು ಸೋಂಕಿನಿAದ ಮೃತಪಟ್ಟಿದ್ದಾರೆ. 20,659 ಜನರು ಗುಣಮುಖರಾಗಿದ್ದು ಅವರನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ ಎಂದು ಆಯೋಗದ ಹೇಳಿಕೆ ತಿಳಿಸಿದೆ.
ಕೊರೊನಾ ವೈರಾಣು ಸೋಂಕಿಗೆ ಮತ್ತೆ 109 ಜನರು ಬಲಿಯಾಗಿದ್ದು ಕಳೆದ 24 ಗಂಟೆಗಳಲ್ಲಿ 397 ಹೊಸ ದೃಢಪಟ್ಟ ಪ್ರಕರಣಗಳು ದಾಖಲಾಗಿವೆ. ಚೀನಾದ 31 ಪ್ರಾಂತ್ಯಗಳಲ್ಲಿ ಸೋಂಕಿತರ ಸಂಖ್ಯೆ 76,288 ದಷ್ಟಿದೆ. ಈ ಪೈಕಿ 53,284 ಜನರು ಇನ್ನೂ ಗುಣಮುಖರಾಗಿಲ್ಲ.
ಡಿಸೆಂಬರ್ ಅಂತ್ಯದ ವೇಳೆಗೆ ಕೊರೊನಾ ವೈರಾಣು ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡಿತು. ಇದೀಗ 25 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಡಬ್ಲು. ಹೆಚ್.ಒ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©