ಚೀನಾಕ್ಕೆ
100
ಮಿಲಿಯನ್
ಡಾಲರ್ ನೆರವು
ಚೀನಾಕ್ಕೆ 100 ಮಿಲಿಯನ್ ಡಾಲರ್ ತುರ್ತು ನೆರವು ಒದಗಿಸಿದ ಬಿಲ್ ಅಂಡ್ ಮೆಲಿಂದಾ ಗೇಟ್ಸ್ ಫೌಂಡೇಷನ್ ಸಹ ಅಧ್ಯಕ್ಷ ಬಿಲ್ ಗೇಟ್ಸ್ ಗೆ ಚೀನಾ ಅಧ್ಯಕ್ಷ ಗ್ಸಿ ಜಿನ್ ಪಿಂಗ್ ಧನ್ಯವಾದ ಸಮರ್ಪಿಸಿದ್ದಾರೆ. ಇಂತಹ ಪ್ರಮುಖ ಸಮಯದಲ್ಲಿ ಚೀನಾ ಜನರೊಂದಿಗೆ ಇರುವುದಾಗಿ ಹೇಳಿಕೆ ಹಾಗೂ ನೆರವು ನೀಡಿದ ಗೇಟ್ಸ್ ಫೌಂಡೇಷನ್ ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. ಬಿಲ್ ಗೇಟ್ಸ್ ತಮ್ಮ ಪತ್ರದಲ್ಲಿ, ಈ ಮೊತ್ತ ಚೀನಾದ ಸಾಂಕ್ರಾಮಿಕ ರೋಗಗಳ ಕುರಿತ ಸಂಶೋಧನೆ, ತುರ್ತು ಮಧ್ಯಪ್ರವೇಶ, ಔಷಧ, ಚುಚ್ಚುಮದ್ದು ಮತ್ತು ತಪಾಸಣೆಗಳ ಕುರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ ಎಂದಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©