ಶುಕ್ರವಾರ 03 ಜುಲೈ 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ನ್ಯಾಯಾಂಗ ದತ್ತಾಂಶ ಗ್ರಿಡ್ ಸ್ಥಾಪನೆ: ಪ್ರಧಾನಿ

ದೇಶದ ಪ್ರತಿಯೊಂದು ನ್ಯಾಯಾಲಯವನ್ನು ಇ-ಕೋರ್ಟ್ ಇಂಟಿಗ್ರೇಟೆಡ್ ಮಿಷನ್ ಮೋಡ್ ಯೋಜನೆಗೆ ಸಂಪರ್ಕ ಕಲ್ಪಿಸುವುದು ಸರ್ಕಾರದ ಪ್ರಯತ್ನವಾಗಿದೆ

2020-02-22 05:30:00,

Ajeya Imageದೆಹಲಿ, ಫೆ.22

ದೇಶದ ಪ್ರತಿಯೊಂದು ನ್ಯಾಯಾಲಯವನ್ನು ಇ-ಕೋರ್ಟ್ ಇಂಟಿಗ್ರೇಟೆಡ್ ಮಿಷನ್ ಮೋಡ್ ಯೋಜನೆಗೆ ಸಂಪರ್ಕ ಕಲ್ಪಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿಂದು ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವದ ಕೋಟ್ಯಂತರ ನಾಗರಿಕರಿಗೆ ನ್ಯಾಯ ಮತ್ತು ಘನತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಪ್ರಮುಖ ಪಾತ್ರವನ್ನು ವಹಿಸಿವೆ. ನ್ಯಾಯದಾನ ಒದಗಿಸುವಲ್ಲಿ ನ್ಯಾಯಾಧೀಶರು ವಹಿಸುತ್ತಿರುವ ಕಾಳಜಿ ಶ್ಲಾಘನೀಯವಾಗಿದೆ. ನಿಮ್ಮಗಳ ನಡುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ಸಂತಸದ ವಿಚಾರ ಎಂದರು.

ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಸ್ಥಾಪನೆ ಯು ನ್ಯಾಯಾಲಯದ ಕಾರ್ಯ ವಿಧಾನಗಳನ್ನು ಸುಲಭಗೊಳಿಸುತ್ತದೆ. ಅಭಿವೃದ್ಧಿ ಮತ್ತು ಪರಿಸರದ ನಡುವಿನ ಸಮತೋಲನದ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಭಾರತದ ನ್ಯಾಯಾಂಗಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಮಿಲಿಟರಿ ಸೇವೆಯಲ್ಲಿ ಹೆಣ್ಣುಮಕ್ಕಳ ನೇಮಕ, ಫೈಟರ್ ಪೈಲಟ್‌ಗಳ ಆಯ್ಕೆ ಪ್ರಕ್ರಿಯೆ, ಗಣಿ ಗಳಲ್ಲಿ ರಾತ್ರಿಯಲ್ಲಿ ಕೆಲಸ ಮಾಡುವ ಸ್ವಾತಂತ್ರ‍್ಯ, ಸರ್ಕಾರವು ಅನೇಕ ಬದಲಾವಣೆಗಳನ್ನು ತರಲು ನ್ಯಾಯಾಲಯಗಳ ಮಾರ್ಗದರ್ಶನ, ಆದೇಶಗಳು ಕಾರಣವಾಗಿವೆ ಎಂದರು.

ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©