ಶುಕ್ರವಾರ 03 ಜುಲೈ 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಮಾಧ್ಯಮಗಳು ಸತ್ಯನಿಷ್ಠವಾಗಿ ಇರಲಿ: ರಾಮನಾಥ್ ಕೋವಿಂದ್

ಇಂದಿನ ವೇಗದ ಮತ್ತು ಜನಪ್ರಿಯ ಮಾಧ್ಯಮಗಳ ನಡುವೆ, ಸಾಂಪ್ರದಾಯಿಕ ಮಾಧ್ಯಮಗಳು ಸತ್ಯನಿಷ್ಠವಾಗಿದ್ದುಕೊಂಡೇ, ಪ್ರಸ್ತುತವಾಗಿರಲು ಪ್ರಯತ್ನಿಸ ಬೇಕಿದೆ ಎಂದು ರಾಷ್ಟಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

2020-02-22 05:30:00,

Ajeya Imageಬೆಂಗಳೂರು, ಫೆ.22: ಇಂದಿನ ವೇಗದ ಮತ್ತು ಜನಪ್ರಿಯ ಮಾಧ್ಯಮಗಳ ನಡುವೆ, ಸಾಂಪ್ರದಾಯಿಕ ಮಾಧ್ಯಮಗಳು ಸತ್ಯನಿಷ್ಠವಾಗಿದ್ದುಕೊಂಡೇ, ಪ್ರಸ್ತುತವಾಗಿರಲು ಪ್ರಯತ್ನಿಸ ಬೇಕಿದೆ ಎಂದು ರಾಷ್ಟಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ದಿ ಹಿಂದೂ ಪತ್ರಿಕೆ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ನಾಲ್ಕನೇ ಆವೃತ್ತಿಯ ದಿ ಹಡಲ್ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಗತ್ತು ಇಂದು ಮಾಹಿತಿಯ ತಂತ್ರಜ್ಞಾನದ ಮೇಲೆ ರೂಪುಗೊಳ್ಳುತ್ತಿದೆ. ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳು ಮಾಧ್ಯಮವನ್ನು ಜನರಿಗೆ ಹತ್ತಿರವಾಗಿಸಿವೆ. ಈ ಪ್ರವೃತ್ತಿ ಪತ್ರಿಕೋದ್ಯಮದ ಮೇಲೆ ಪರಿಣಾಮ ಬೀರುತ್ತಿವೆ ಎಂದರು.

ಹೊಸ ಮಾಧ್ಯಮಗಳು ವೇಗದ ಮತ್ತು ತರಾತುರಿಯ ಸುದ್ದಿಗಳ ಮೊರೆ ಹೋಗಿದ್ದರೆ, ಹಳೆಯ ಹಾಗೂ ಸಾಂಪ್ರದಾಯಿಕ ಮಾಧ್ಯಮಗಳು ಮಾತ್ರ ನಿಖರ ಮಾಹಿತಿಯನ್ನು ಅವಲಂಬಿಸಿವೆ ಎಂದರು.

ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©