Saturday 05 December 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಟಿವಿ ಕ್ಯಾಮೆರಾ

ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ ಬರಲಿದ್ದು, ಕಳ್ಳತನಕ್ಕೆಂದು ಬಂದರೆ ಕ್ಯಾಮರಾವು ಎಚ್ಚರಿಕೆ ನೀಡ

2020-02-22 05:30:00,

Ajeya Imageಬೆಂಗಳೂರು, ಫೆ.22

ಅಪರಾಧ ತಡೆಗೆ ಧ್ವನಿ ಆಧಾರಿತ ಸಿಸಿ ಕ್ಯಾಮರಾ ಬರಲಿದ್ದು, ಕಳ್ಳತನಕ್ಕೆಂದು ಬಂದರೆ ಕ್ಯಾಮರಾವು ಎಚ್ಚರಿಕೆ ನೀಡಲಿದೆ.

ಅಪರಾದ ತಡೆಗೆ ಕಡಿವಾಣ ಹಾಕಲು ವೈಟ್‌ಫಿಲ್ಡ್ ಉಪ ವಿಭಾಗದ ಪೊಲೀಸರು ಸಿಸಿ ಕ್ಯಾಮರಾ ಮತ್ತು ಆಡಿಯೋ ಸ್ಪೀಕರ್ ಅಳವಡಿಸಲು ಖಾಸಗಿ ಕಂಪನಿ ಜೊತೆ ಕೈ ಜೋಡಿಸಿದ್ದಾರೆ.

ವೈಟ್‌ಫಿಲ್ಡ್ ಉಪ ವಿಭಾಗ ವ್ಯಾಪ್ತಿಯ ಕೃಷ್ಣರಾಜಪುರ, ಮಹದೇವಪುರ, ಕಾಡುಗೋಡಿಗಳಲ್ಲಿ ಅಳವಡಿಸಲಾಗುತ್ತಿದೆ.

ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಸಲಹೆ ಸೂಚನೆ ನೀಡಲು ಸಂಚಾರ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಗುವ ವಿಡಿಯೋ ಜಾಗದಲ್ಲಿ ಆಡಿಯೋ ಕೇಳಿಸುವ ವ್ಯವಸ್ಥೆ ಇರುತ್ತದೆ. ಯಾರಾದರೂ ಕಿಡಿಗೇಡಿ ಕೃತ್ಯ ಅಥವಾ ಇನ್ನಿತರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದುಬಂದರೆ ಅವರನ್ನು ಎಚ್ಚರಿಸುವ ಸಂದೇಶ ಇದಾಗಿರಲಿದೆ.


ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©