ಬೆಂಗಳೂರು,ಫೆ.22: ನಿನ್ನೆ ನಿಧನರಾದ ಮಾಜಿ ಸಚಿವ ಸಿ.ಚನ್ನಿಗಪ್ಪ ಅವರ ಅಂತ್ಯಕ್ರಿಯೆ ಇಂದು ಬೈರನಾಯ್ಕನಹಳ್ಳಿಯಲ್ಲಿ ನೆರವೇರಿತು. ವಿವಿಧ ರಾಜಕೀಯ ಗಣ್ಯರು ಅಪಾರ ಅಭಿಮಾನಿಗಳು ಹಾಜರಿದ್ದು, ಅಂತಿಮ ದರ್ಶನ ಪಡೆದರು.ಮಾಜಿ ಸಚಿವ ಚೆನ್ನಿಗಪ್ಪ ನಿಧನಕ್ಕೆ ಜೆಡಿಎಸ್ ವರಿಷ್ಟ ಹೆಚ್. ಡಿ. ದೇವೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ನನ್ನನ್ನು ತೀವ್ರ ದುಃಖಕ್ಕೀಡು ಮಾಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನ್ನ ಕಟ್ಟಾ ಅಭಿಮಾನಿಯಾಗಿದ್ದ ಚೆನ್ನಿಗಪ್ಪ, ಗ್ರಾಮೀಣ ಜನರ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡುತ್ತಿದ್ದರು ಎಂದಿದ್ದಾರೆ.
Designed, Developed and Maintained by PRABHAT SERVICES ™  , AJEYA KANNADA DAILY 2019 ©