Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಶಿವಮೊಗ್ಗದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಶಿವರಾತ್ರಿ ಆಚರಣೆ

ಮಹಾಶಿವರಾತ್ರಿಯ ಅಂಗವಾಗಿ ನಿನ್ನೆ ಶಿವಮೊಗ್ಗ ನಗರದ ವಿವಿಧ ಶಿವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಟಾಪ್ ಟೆನ್ ಸುದ್ದಿ

2020-02-22 05:30:00,

ಶಿವಮೊಗ್ಗ,ಫೆ.22:
ಮಹಾಶಿವರಾತ್ರಿಯ ಅಂಗವಾಗಿ ನಿನ್ನೆ  ಶಿವಮೊಗ್ಗ ನಗರದ ವಿವಿಧ ಶಿವ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ವಾಸವಿ ಶಾಲಾ ಆವರಣದಲ್ಲಿ ಭಗತ್ ಸೇನೆ ವತಿಯಿಂದ ಲೋಕಕಲ್ಯಾಣಾರ್ಥ ಸ್ವಹಸ್ತದಿಂದ ಮಹಾರುದ್ರಾಭಿಷೇಕ ಕಾಲಭೈರವ ಪೂಜೆ ಹಾಗೂ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು. ವಿನೋಬನಗರ ಶಿವಾಲಯದಲ್ಲಿ ಲಿಂಗೈಕ್ಯ ಸಿದ್ದಗಂಗಾ ಶ್ರೀಗಳು ಅನುಷ್ಠಾನ ನಿರತರಾಗಿ, ಶಿವನ ಮುಂದೆ ಕುಳಿತಿರುವ ಅಲಂಕಾರ ನಡೆಸಿರುವುದು ವಿಶೇಷ. 
ಪ್ರತಿವರ್ಷದಂತೆ ಈ ವರ್ಷವೂ ಹರಕೆರೆ ಶ್ರೀರಾಮೇಶ್ವರ ಸನ್ನಿ„ಯಲ್ಲಿ ಭಕ್ತರ ದಂಡು ನೆರೆದಿದೆ. ಪೆÇಲೀಸರು, ದೇವಾಲಯ ಸಮಿತಿ, ಕಾರ್ಯಕರ್ತರು ಅವ್ಯವಸ್ಥೆಯಾಗದಂತೆ ನೋಡಿಕೊಂಡರು. ಸ್ಕೌಟ್ಸ್ ಹಾಗೂ ಗೈಡ್ಸ್ ನ ಸ್ವಯಂಸೇವಕರು ಜೊತೆಯಲ್ಲಿದ್ದು, ಭಕ್ತಾದಿಗಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ತೀರ್ಥಹಳ್ಳಿ ಮಾರ್ಗಕ್ಕೆ ತೆರೆಳುವ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ವಾಹನಗಳು ಗಜಾನನ ಗ್ಯಾರೇಜ್ ಪಕ್ಕದಿಂದ ತೆರೆಳಿ, ಸಹ್ಯಾದ್ರಿ ನಾರಾಯಣ ಹೃದಯಾಲಯದ ಪಕ್ಕದಿಂದ ತೀರ್ಥಹಳ್ಳಿ ರಸ್ತೆಗೆ ಸಂಪರ್ಕ ಪಡೆದುಕೊಳ್ಳುವಂತೆ ಸಂಚಾರ ಬದಲಾವಣೆ ಮಾಡಲಾಗಿತ್ತು.
ಬಸವನಗುಡಿಯ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಮಹಾತಪಸ್ವಿ ಪ್ರತಿಷ್ಠಾನದವರು ಭಕ್ತಾದಿಗಳಿಗೆ ತುಳಸಿ ಹಾಗೂ ಬಿಲ್ವಪತ್ರೆಗಳನ್ನು ವಿತರಿಸಿದರು. ಗಾಂಧಿಪಾರ್ಕಿನ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ಗುತ್ತಿಗೆದಾರರಿಂದ ಪಾರ್ಕಿನ ಶಿವಪ್ರತಿಮೆಗೆ ಪೂಜೆ ಏರ್ಪಡಿಸಲಾಗಿದ್ದು ಮತ್ತು ಭಕ್ತಾದಿಗಳಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು. ನಗರದೊಳಗಿನ ದೇವಾಲಯಗಳ ಜೊತೆಗೆ ಹೊರವಲಯದ ಊರುಗಡೂರಿನ ಗುಡ್ಡೇಮರಡಿಯಲ್ಲೂ ಶಿವಸನ್ನಿಧಾನದಲ್ಲಿ ಸಂಭ್ರಮ ಮನೆಮಾಡಿತ್ತು.


ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©