Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಮಾರಿಕಾಂಬಾ ಜಾತ್ರೆಯಲ್ಲಿ ಸರ್ಕಾರಿ ಸೇವೆಗಳ ಕುರಿತು ಜಾಗೃತಿ

ಸರ್ಕಾರದ 45ಕ್ಕೂ ಹೆಚ್ಚು ಇಲಾಖೆಗಳ 400ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಜನತೆಗೆ ಲಭ್ಯವಾಗಲಿದೆ

2020-02-22 05:30:00,

Ajeya Imageಸಾಗರ, ಫೆ.22: 
ಸರ್ಕಾರದ 45ಕ್ಕೂ ಹೆಚ್ಚು ಇಲಾಖೆಗಳ 400ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಜನತೆಗೆ ಲಭ್ಯವಾಗಲಿದೆ. ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯ ಸಿಗಲಿದೆ.
- ಇದು ಸ್ಥಾಪನೆಯಾಗಿರುವುದು ಸಾಗರ ಮಾರಿಕಾಂಬಾ ಜಾತ್ರೆಯಲ್ಲಿ...
ಸರ್ಕಾರಿ ರಜಾ ದಿನಗಳಲ್ಲಿಯೂ ಕಾಮನ್ ಸರ್ವೀಸ್ ಸೆಂಟರ್-ಸೇವಾಸಿಂಧು ಕೇಂದ್ರಗಳಲ್ಲಿ ಸರ್ಕಾರಿ ಸೇವೆಗಳ ಮಾಹಿತಿ ಪಡೆದುಕೊಂಡು ಸಂಬಂಧಿಸಿದ ಇಲಾಖೆಯಲ್ಲಿ ಅಗತ್ಯವಿರುವ ಸೇವೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕರಿಗೆ ಸೇವಾ ಸಿಂಧು ಕೇಂದ್ರವು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.
45ಕ್ಕೂ ಹೆಚ್ಚು ಇಲಾಖೆ ಸೇವೆಗಳು ಒಂದೇ ಸೂರಿನಡಿ ಸಿಗುವುದರಿಂದ ಜನರು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯುವುದು ತಪ್ಪುತ್ತದೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸೇವಾ ಸಿಂಧು ಕೇಂದ್ರಗಳು ತೆರೆಯಲಾಗಿದೆ. 350ಕ್ಕೂ ಸೇವಾ ಸಿಂಧು ಕೇಂದ್ರಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಕಾಮನ್ ಸರ್ವೀಸ್ ಸೆಂಟರ್(ಸಿಎಸ್ಸಿ) ಜಿಲ್ಲಾ ವ್ಯವಸ್ಥಾಪಕ ಬಿ.ಕಿರಣ್ಕುಮಾರ್ ಮಾತನಾಡಿ, ಸರ್ಕಾರಿ ಇಲಾಖೆಗಳ ಸೇವೆಗಳು ಜನರಿಗೆ ತ್ವರಿತಗತಿಯಲ್ಲಿ ಸಿಗಬೇಕು ಎನ್ನುವ ಆಶಯದಿಂದ ಕಾಮನ್ ಸರ್ವೀಸ್ ಸೆಂಟರ್ಗಳು ಕಾರ್ಯ ನಿರ್ವಹಿಸುತ್ತಿವೆ. ಜನರು ಸಮೀಪದ ಸಿಎಸ್‍ಸಿ ಗಳಲ್ಲಿ ಸರ್ಕಾರಿ ಸೇವಾ ಲಭ್ಯ ಪಡೆದುಕೊಳ್ಳಬೇಕು.
ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ದರ್ಶನ್ ಮಾತನಾಡಿ, ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಆರ್ ಟಿ ಸಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಸೇವಾಸಿಂಧು ಕೇಂದ್ರಗಳಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಿಎಸ್ಸಿ ಜಿಲ್ಲಾ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಿಸುವ ದಿಸೆಯಲ್ಲಿ ಸಿಎಸ್ಸಿ ಕೇಂದ್ರಗಳು ಶ್ರಮಿಸುತ್ತಿವೆ. ಇ-ಸಾಕ್ಷರತಾ, ಆನ್‍ಲೈನ್ ಶಿಕ್ಷಣ ಕೋರ್ಸ್‍ಗಳನ್ನು ಸಿಎಸ್ಸಿ ಮುಖಾಂತರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಿಎಸ್‍ಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ವಿಲ್‍ಇಗಳಾದ ಅಜಿತ್, ಆನಂದ್, ಅಭಿಷೇಕ್, ಎನ್.ಸೋಮಶೇಖರ್, ಮಹಮ್ಮದ್ ರಫಿಕ್, ವಾಸೀಂ, ಸತೀಶ್ ಸೇರಿದಂತೆ ಮತ್ತಿತರು ಹಾಜರಿದ್ದರು. ಗ್ರಾಹಕರಿಗೆ ಮಾಹಿತಿ ಜಾಗೃತಿ ಪತ್ರಗಳನ್ನು ಹಂಚಲಾಯಿತು.
ಪದಗಂಟು :   
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©