Saturday 05 December 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ರಾಜೇಂದ್ರನಗರದಲ್ಲಿ ನಾಳೆ ವಿವಿಧ ಸ್ಪರ್ಧೆ

ರಾಜೇಂದ್ರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಫೆ. 23ರ ನಾಳೆ ಸಂಜೆ 6ಗಂಟೆಗೆ ರಾಜೇಂದ್ರನಗರ ಮೈದಾನದಲ್ಲಿ ಸಂಕ್ರಾಂತಿ ಶಿವರಾತ್ರಿ ಸಂಭ್ರಮ ಏರ್ಪಡಿಸಲಾಗಿದೆ

ಸುಮಾರ್ ಸುದ್ದಿ

2020-02-22 05:30:00,

ಶಿವಮೊಗ್ಗ:  ರಾಜೇಂದ್ರ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಫೆ. 23ರ ನಾಳೆ ಸಂಜೆ 6ಗಂಟೆಗೆ ರಾಜೇಂದ್ರನಗರ ಮೈದಾನದಲ್ಲಿ ಸಂಕ್ರಾಂತಿ ಶಿವರಾತ್ರಿ ಸಂಭ್ರಮ ಏರ್ಪಡಿಸಲಾಗಿದೆ.  ಈ ಸಂದರ್ಭದಲ್ಲಿ ಪುಟಾಣಿಗಳಿಗೆ ಗಂಡು, ಹೆಣ್ಣು ಮಕ್ಕಳಿಗೆ, ಹಾಗೂ  ಪುರುಷರಿಗೆ, ಮಹಿಳೆಯರಿಗೆ ಮತ್ತು ಹಿರಿಯ ನಾಗರೀಕರಿಗೆ ವಿವಿಧ ರಂಗೋಲಿ ಸೇರಿದಂತೆ ಆಕರ್ಷಕ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಫೆ.23ರ ಬೆಳಿಗ್ಗೆ ಮಕ್ಕಳ ಸ್ಪರ್ಧೆ ನಡೆಯಲಿದೆ. ಜಿಲ್ಲಾ ರಕ್ಷಣಾ„ಕಾರಿ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಮಹಾ ನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ,  ತರುಣೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ನರಸಿಂಹ ಮೂರ್ತಿ, ಸಂಘದ ಗೌರವಾಧ್ಯಕ್ಷ ಡಾ.ಕೆ.ಆರ್.ಶ್ರೀಧರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.  ಸಂಘದ ಅಧ್ಯಕ್ಷ ಪ್ರೊ.ಜೆ.ಎಲ್.ಪದ್ಮನಾಭ್ ಅಧ್ಯಕ್ಷತೆ ವಹಿಸಲಿದ್ದಾರೆ.

ಆಸಕ್ತರು ಕಡ್ಡಾಯವಾಗಿ 300 ರೂ. ಶುಲ್ಕವನ್ನು ಪಾವತಿಸಿ ರಶೀದಿ ಪಡೆದು  ಸ್ಪರ್ಧೆಗೆ ಭಾಗ ವಹಿಸಲು  ಕಾರ್ಯಕಾರಿ ಮಂಡಳಿ ಕೋರಿದೆಪದಗಂಟು :
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©