ಶುಕ್ರವಾರ 03 ಜುಲೈ 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ದಾವಣಗೆರೆ ರೈಲು ನಿಲ್ದಾಣದ 2ನೇ ಪ್ರವೇಶ ದ್ವಾರದ ಉದ್ಘಾಟನೆ

ಅಭಿವೃದ್ದಿ ಕಾಮಗಾರಿಗಳ ಸೌಲಭ್ಯವನ್ನು ಜನತೆ ಪಡೆಯಿರಿ : ಜಿ.ಎಂ. ಸಿದ್ದೇಶ್ವರ

2020-02-22 05:30:00,

ದಾವಣಗೆರೆ,ಫೆ.22:
ಪ್ರತಿದಿನ ಸಾವಿರಾರು ಪ್ರಯಾಣಿಕರು ದಾವಣಗೆರೆ ರೈಲ್ವೆ ನಿಲ್ದಾಣದಿಂದ ಓಡಾಡುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಎರಡನೇ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು  ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ನಗರದ ರೈಲು ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಎರಡನೇ ಪ್ರವೇಶ ದ್ವಾರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪ್ರತಿದಿನ ಸುಮಾರು 6500 ಪ್ರಯಾಣಕರು ದಾವಣಗೆರೆ ರೈಲ್ವೆ ನಿಲ್ದಾಣವನ್ನು ಬಳಸುತ್ತಿದ್ದು ಸುಮಾರು 50ಕ್ಕೂ ಹೆಚ್ಚು ಟ್ರೈನ್‍ಗಳು ಪ್ರತಿದಿನ ಓಡಾಡುತ್ತಿವೆ. ತಿಂಗಳಿಗೆ ಸುಮಾರು 1.5 ಕೋಟಿ ಆದಾಯ ಈ ನಿಲ್ದಾಣದಿಂದ ಬರುತ್ತಿದೆ. ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದ್ವಾರವನ್ನು ಸುಮಾರು 4.5 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ. ಫುಟ್‍ಓವರ್ ಬ್ರಿಡ್ಜ್, ಫ್ಲಾಟ್‍ಫಾರ್ಮ್ ಶೆಲ್ಟರ್, ಸ್ಟೇಷನ್ ಕಟ್ಟಡ, ಪಾರ್ಕಿಂಗ್ ವ್ಯವಸ್ಥೆ, ಗಾರ್ಡನ್ ಈ ಎಲ್ಲ ಸೌಲಭ್ಯವನ್ನು ಇಲ್ಲಿ ಒದಗಿಸಲಾಗಿದೆ. ಸುಮಾರು ರೂ.15 ಕೋಟಿ ವೆಚ್ಚದಲ್ಲಿ ನೂತನ ರೈಲ್ವೇ ಸ್ಟೇಷನ್ ಮಂಜೂರು ಮಾಡಿಸಿದ್ದು, ಈಗಾಗಲೇ ಸ್ಟೇಷನ್ ಕಾಮಗಾರಿ ನಡೆಯುತ್ತಿದೆ. ಜುಲೈ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಇಲಾಖೆಯವರು ತಿಳಿಸಿದ್ದಾರೆ. ಹಾಗೂ ಪ್ರಯಾಣ ಕರ ಅನುಕೂಲಕ್ಕಾಗಿ ಈ ರೈಲ್ವೆ ನಿಲ್ದಾಣದಲ್ಲಿ ನಾಲ್ಕು ಎಸ್ಕಲೇಟರ್‍ಗಳನ್ನು ಸಹ ಅಳವಡಿಸಲು ಸೂಚಿಸಿದ್ದೇನೆ ಎಂದರು.
ಮಾಯಕೊಂಡದಿಂದ ಹರಿಹರದವರೆಗೆ ಈಗಾಗಲೇ ರೂ.250 ಕೋಟಿ ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಹುಬ್ಬಳ್ಳಿವರೆಗೆ ಮಾರ್ಚ್ 2020 ರ ವೇಳಗೆ ಡಬ್ಲಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ. ಡಿಸಿಎಂ ಟೌನ್‍ಶಿಪ್ ಬಳಿ ಸೇತುವೆ ಅವೈಜ್ಞಾನಿಕವಾಗಿತ್ತು ಎಂದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ದೇಶಾದ್ಯಂತ ಉತ್ತಮ ರೈಲ್ವೇ ನೀಡುವ ಸೇವೆಯಲ್ಲಿ ಸರ್ಕಾರ ಉತ್ತಮ ಅಭಿವೃದ್ದಿ ಕಾಣುತ್ತಿದೆ. ದಾವಣಗೆರೆ ನಗರದ ರೈಲ್ವೇ ನಿಲ್ದಾಣ ಆಧುನೀಕರಣ ಗೊಳ್ಳುತ್ತಿರುವುದು ಸಂತೋಷದ ವಿಷಯವಾಗಿದ್ದು ರೈಲ್ವೇ ನಿಲ್ದಾಣದಲ್ಲಿ ಉತ್ತಮ ಬೆಳವಣೆಗೆಗಳು ಆಗುತ್ತಿವೆ ಎಂದರು.
ರಾಜ್ಯದಲ್ಲಿ ಉತ್ತಮವಾದ ರೇಲ್ವೇ ಸ್ಟೇಷನ್ ಅಂದರೆ ದಾವಣಗೆರೆಯದ್ದು ಎಂಬ ಹೆಸರು ತರಲು ಸಾಂಸದರು ಪಣ ತೊಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಗೆಸ್ಟ್ ಹೌಸ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸಾಂಸದವರು ಒದಗಿಸಿಕೊಡಲಿ ಎಂದು ಆಶಿಸಿದರು.
ಮೇಯರ್ ಬಿ.ಜೆ. ಅಜಯ್‍ಕುಮಾರ್, ಜಿ.ಪಂ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ಅಪರ್ಣಾ ಗರ್ಗ್, ಉಪ ಮೇಯರ್ ಸೌಮ್ಯ ದೂಡಾ, ಎನ್.ಎಚ್. ಶಿವಕುಮಾರ್, ಎಸ್.ಎಂ.ವೀರೇಶ್, ಯಶವಂತರಾವ್ ಜಾಧವ್ ಹಾಜರಿದ್ದರು.
2024 ರ ವೇಳೆಗೆ ಶೇ.100 ರಷ್ಟು ರೇಲ್ವೆ ಲೈನ್ ವಿದ್ಯುದೀಕರಣ ಗೊಳ್ಳಲಿದೆ. ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆಯನ್ನು ನೀಡುವ ಸಲುವಾಗಿ 500 ಪ್ಯಾಸೆಂಜರ್ ಟ್ರೈನ್‍ಗಳನ್ನು ಮತ್ತು 750 ರೈಲ್ವೆ ನಿಲ್ದಾಣಗಳನ್ನು 2025 ರ ವೇಳೆಗೆ ಖಾಸಗಿಯವರಿಗೆ ವಹಿಸುವ ಬಗ್ಗೆ ರೈಲ್ವೆ ಸಚಿವಾಲಯ ಗಂಭೀರ ಚಿಂತನೆ ನಡೆಸುತ್ತಿದೆ.
    -- ಜಿ.ಎಂ.ಸಿದ್ದೇಶ್ವ, ಸಾಂಸದ



ಪದಗಂಟು :
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©