Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಹೊನ್ನಾಳಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

2020-02-22 05:30:00,

Ajeya Image
ಹೊನ್ನಾಳಿ.ಫೆ.22;ನಾಡಿನ ನೆಲ ಜಲದ ರಕ್ಷಣೆ ಮತ್ತು ನಮ್ಮ ಸನಾತನ ಸಂಸ್ಕೃತಿಯ ಉಳಿವಿಗಾಗಿ ತಮ್ಮ ಸ್ವಂತ ಬದುಕನ್ನೇ ತೊರೆದ ಸಂತರು ಶರಣರು ದಾರ್ಶನಿಕರು ವೀರ ಯೋಧರು, ಸ್ವಾತಂತ್ರ್ಯ ಸೇನಾನಿಗಳು ನಮ್ಮಿಂದ ಕಣ್ಮರೆಯಾದರೂ ಅವರು ಬಿಟ್ಟು ಹೋದ ಆದರ್ಶಗಳು ರಾಷ್ಟ್ರ ಪ್ರೇಮದಂತಹ ಅಮೂಲ್ಯ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆ ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದಾರ್ಶನಿಕರ ಜಯಂತಿಗಳಿಗೆ ಅರ್ಥ ನೀಡಿದಂತಾಗುತ್ತದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ನೂತನ ನ್ಯಾಮತಿ ತಾಲ್ಲೂಕು ಕೇಂದ್ರದ ತಾಲೂಕು ಆಡಳಿತ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ತ್ರಿಪದಿ ಕವಿ ಸರ್ವಜ್ಞ ಮತ್ತು ಕಾಯಕ ಶರಣರ ದಲಿತ ವಚನಕಾರರು ಜಯಂತಿ ಕಾರ್ಯಕ್ರಮವನ್ನು ಸರಳ ಆಚರಣೆ ಮೂಲಕ ಉದ್ಘಾಟಿಸಿ ಮಾತನಾಡಿದರು. 
ಸ್ವಾಭಿಮಾನ ಸಾಹಸ ಮೆರೆದ ಪ್ರತಿಯೊಬ್ಬರಲ್ಲಿ ಹಿಂದೂಸಾಮ್ರಾಟರಲ್ಲಿ  ಶಿವಾಜಿ ಮಹಾರಾಜರು ಪ್ರಥಮರೆನಿಸಿದ್ದಾರೆ. ಮೊಘಲರಿಂದ ಹಿಂದುಗಳಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಧರ್ಮ ರಕ್ಷಣೆಗಾಗಿ ಹೋರಾಡಿದ ಕೀರ್ತಿ ಛತ್ರಪತಿ ಶಿವಾಜಿಗೆ ಸಲ್ಲುತ್ತದೆ. ದೇಶದ ದಾಸ್ಯ ಮುಕ್ತ್ತಿ ಸ್ವಾತಂತ್ರ್ಯ ಜೀವನಕ್ಕಾಗಿ ಹೋರಾಟ ನಡೆಸಿದ ಶಿವಾಜಿ ಮಹಾರಾಜರು ಧೈರ್ಯದ ಸಂಕೇತವಾಗಿದ್ದಾರೆ. ದಲಿತ ವಚನಕಾರರಿಗೆ 12ನೇ ಶತಮಾನದಲ್ಲಿ ಬಸವಣ್ಣನವರು ಎಲ್ಲ ವರ್ಗದವರಿಗೆ ಅನುಭವ ಮಂಟಪದಲ್ಲಿ ಪ್ರಾಧಾನ್ಯತೆ ನೀಡಿದ್ದರು ದಲಿತ ವಚನಕಾರರಾದ ಮಾದಾರ ಚೆನ್ನಯ್ಯ ಡೋಹರ ಕಕ್ಕಯ್ಯ ಮಾದಯ್ಯ ಉರಿಲಿಂಗಪ್ಪ ಪೆದ್ದಿ ಮುಂತಾದವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧಕರು ನಮ್ಮಿಂದ ಕಣ್ಮರೆಯಾದರೂ ಅವರ ಆದರ್ಶಗಳು ಜೀವಂತವಾಗಿವೆ ಎಂದರು.
ಈ ಸಂದರ್ಭದಲ್ಲಿ ತಹಶಿಲ್ದಾರ್  ತನುಜಾ ಸವದತ್ತಿ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಪಾಂಡುರಂಗಪ್ಪ, ನ್ಯಾಮತಿ ನಾಡ ಕಛೇರಿ ಉಪ ತಹಶಿಲ್ದಾರ್ ನಾಗರಾಜಪ್ಪ, ಎಎಸ್‍ಐ ಶಿವಾನಂದಪ್ಪ ಸೇರಿದಂತೆ  ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪದಗಂಟು :  
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©