_220220131848000.JPG)
ಸ್ಮಾರ್ಟ್ಸಿಟಿ ಯೋಜನೆಯಡಿ ದಾವಣಗೆರೆ ನಗರದ ಅಖ್ತರ್ ರಜಾ ಸರ್ಕಲ್ನಿಂದ ಶಾಮನೂರು
ಗ್ರಾಮದವರೆಗಿನ ರಿಂಗ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶಾಮನೂರು ಶಿವಶಂಕರಪ್ಪ
ಚಾಲನೆ ನೀಡಿದರು.
ಅಖ್ತರ್ ರಜಾ ಸರ್ಕಲ್ನಲ್ಲಿ ಕಾಮಗಾರಿಗೆ ಚಾಲನೆ ನೀಡಿದ
ನಂತರ ಮಾತನಾಡಿದ ಅವರು, ಸ್ಮಾರ್ಟ್ಸಿಟಿ ಯೋಜನೆ ದಾವಣಗೆರೆಗೆ ಬಂದ ನಂತರ ಕಾಮಗಾರಿಗಳು
ನಿಧಾನಗತಿಯಲ್ಲಿ ಸಾಗಿದ್ದು, ಇದೀಗ ಭರದಿಂದ ಸಾಗುತ್ತಿವೆ ಎಂದರು. ಇದಕ್ಕೆ
ಜನಪ್ರತಿನಿ„ಗಳ ಒತ್ತಡವೇ ಕಾರಣವಾಗಿದ್ದು, ಒತ್ತಡದ ನೆಪವೊಡ್ಡಿ ಕಾಮಗಾರಿಗಳು ಕಳಪೆ
ಆಗದಂತೆ ಎಚ್ಚರ ವಹಿಸಬೇಕಾಗಿರುವುದು ಅ„ಕಾರಿಗಳು ಮತ್ತು ಪಾಲಿಕೆ ಸದಸ್ಯರ
ಜವಾಬ್ದಾರಿಯಾಗಿದೆ ಎಂದರು.
ದಾವಣಗೆರೆ ನಗರದ ಅಖ್ತರ್ ರಜಾ ಸರ್ಕಲ್ನಿಂದ
ಶಾಮನೂರು ಗ್ರಾಮದವರೆಗಿನ ರಿಂಗ್ ರಸ್ತೆಯ ಅಭಿವೃದ್ದಿ ಕೇವಲ ರಸ್ತೆಯನ್ನಷ್ಟೇ
ಸಿಮೇಂಟೀಕರಣಗೊಳಿಸದೇ ಪುಟ್ಪಾತ್, ಮಳೆ ನೀರು ಚರಂಡಿ, ಅತ್ಯಾಧುನಿಕ ಬೀದಿದೀಪಗಳನ್ನು
ಅಳವಡಿಸಲು ಕಂಬಗಳು ಹಾಗೂ ಗಿಡಗಳನ್ನು ನೆಡಲು ಟೀ ಗಾರ್ಡ್ಗಳನ್ನು ಹಾಕುವ ಮೂಲಕ ಸುಮಾರು
46.31 ಕೋಟಿ ರೂ ವೆಚ್ಚದಲ್ಲಿ 6.5 ಕಿಮೀಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಯೂಬ್ ಪೈಲ್ವಾನ್, ಪಾಲಿಕೆಯ ಸದಸ್ಯರುಗಳಾದ ಜಿ.ಡಿ.
ಪ್ರಕಾಶ್, ನೂರ್ ಜಹಾನ್, ಕಬೀರ್ ಖಾನ್, ಸುಧಾ ಮಂಜುನಾಥ್, ವಿನಾಯಕ ಪೈಲ್ವಾನ್, ಉದಯ್
ಕುಮಾರ್, ಜಾಕೀರ್ ಅಲಿ, ದಾದಾಪೀರ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ
ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಕಾಂಗ್ರೆಸ್ ಪಕ್ಷದ ಮುಖಂಡರುಗಳು,
ಕಾರ್ಯಕರ್ತರು ಉಪಸ್ಥಿತರಿದ್ದರು.