Saturday 05 December 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಕ್ರೀಡಾ ಸಾಮಗ್ರಿಗಳ ವಿತರಣೆ : ಅರ್ಜಿ ಆಹ್ವಾನ

ಕ್ರೀಡಾ ಸಾಮಗ್ರಿಗಳ ವಿತರಣೆ : ಅರ್ಜಿ ಆಹ್ವಾನ

ಲಿಲಿಪುಟ್ ಸುದ್ದಿ

2020-02-22 05:30:00,


ಚಿತ್ರದುರ್ಗ: ನೆಹರು ಯುವ ಕೇಂದ್ರದ ವತಿಯಿಂದ ಯುವಕ-ಯುವತಿಯರ ಸಂಘ ಅಥವಾ ಮಹಿಳಾ ಮಂಡಳಿಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಲು ನೊಂದಾಯಿತ ಹಾಗೂ ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡು 2016 ರಿಂದ ಇಲಾಖೆಯ ಕಾರ್ಯಕ್ರಮಗಳನ್ನು ಮಾಡಿರುವಂತಹ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗುವುದು. ಕಳೆದ ಸಾಲಿನಲ್ಲಿ ಕ್ರೀಡಾ ಸಾಮಗ್ರಿಗಳನ್ನು ಪಡೆಯದೇ ಇರುವ ಸಂಘಗಳಿಗೆ ಆದ್ಯತೆ ನೀಡಲಾಗುವುದು.  ಸಂಘದ ನೊಂದಾಯಿತಿ ಪ್ರತಿ, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರುವ ದಾಖಲಾತಿ ಪ್ರತಿ, ಹಿಂದಿನ ವರ್ಷ ಮಾಡಿರುವ ಕಾರ್ಯಕ್ರಮದ ವಿವರ ಮತ್ತು ಪತ್ರಿಕಾ ಪ್ರತಿಗಳೊಂದಿಗೆ ಸಂಘ ಸಂಸ್ಥೆಯವರು ಫೆ.26 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾ„ಕಾರಿ ಎನ್.ಸುಹಾಸ್ ಹೇಳಿದ್ದಾರೆ.

ಪದಗಂಟು :
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©