Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಸಿಟಿ ಬಸ್ ಓಡಾಟಕ್ಕೆ ಜನರ ಒತ್ತಾಯ

ನಗರದಲ್ಲಿ ಸಿಟಿ ಬಸ್ ಓಡಿಸಲು ಜಿಲ್ಲಾಡಳಿತ ತೀರ್ಮಾನಿಸಬೇಕು ಹಾಗೂ ಖಾಸಗಿ ಸಿಟಿ ಬಸ್ ಓಡಾಟಕ್ಕೂ ಅನುಮತಿ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುಮಾರ್ ಸುದ್ದಿ

2020-05-07 05:30:00, ajeyanews.com

ಚಿಕ್ಕಮಗಳೂರು, ಮೇ 20:

ನಗರದಲ್ಲಿ ಸಿಟಿ ಬಸ್ ಓಡಿಸಲು ಜಿಲ್ಲಾಡಳಿತ ತೀರ್ಮಾನಿಸಬೇಕು ಹಾಗೂ ಖಾಸಗಿ ಸಿಟಿ ಬಸ್ ಓಡಾಟಕ್ಕೂ ಅನುಮತಿ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಜನ ಅವಶ್ಯಕ ಕೆಲಸಗಳಿಗೆ ಓಡಾಡಲೂ ಅನುಮತಿ ನೀಡಲಾಗಿದೆ.

ಆದರೆ ಗೃಹಮಂಡಳಿ ಬಡಾವಣೆ ಸೇರಿದಂತೆ ಉಪ್ಪಳ್ಳಿ, ಹಿರೆಮಗಳೂರು, ರಾಮನಹಳ್ಳಿ, ರಾಂಪುರ, ಕಲ್ದೊಡ್ಡಿ ಮುಂತಾದ ಕಡೆಯಿಂದ ನಗರಕ್ಕೆ ನಡೆದುಕೊಂಡು ಬರಲು ಸಾಧ್ಯವಾಗುವುದಿಲ್ಲ. ಹಿರಿಯ ನಾಗರಿಕರಿಗಂತೂ ದೊಡ್ಡ ಸಮಸ್ಯೆಯಾಗಿದೆ. ಬ್ಯಾಂಕ್ ಸೇರಿದಂತೆ ಕೆಲವು ಕಚೇರಿ ಕೆಲಸಗಳಿಗೆ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ನಗರಕ್ಕೆ ಬರುವುದು ಅನಿವಾರ್ಯ. ನಡೆದುಕೊಂಡು ಬಂದು ಸಾಮಾನುಗಳನ್ನೂ ಖರೀದಿಸಿ ಹಿಡಿದುಕೊಂಡು ಮತ್ತೆ ನಡೆದುಹೋಗಲು ಸಾಧ್ಯವಾಗುವುದಿಲ್ಲ .

ಜಿಲ್ಲಾಡಳಿತ ಶೇ.50 ರಷ್ಟು ಪ್ರಯಾಣಿಕರು ಅವರ ಗುರುತಿನ ಚೀಟಿ ತೋರಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಟಿ ಬಸ್ ಹಾಗೂ ಖಾಸಗಿ ನಗರಸಾರಿಗೆ ಬಸ್‌ಗಳಲ್ಲಿ ಓಡಾಡಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.ಈಗಾಗಲೇ ನಿರ್ಬಂಧ ಸಡಿಲಿಸಿದ ನಂತರ ಆಟೋರಿಕ್ಷಾಗಳ ಓಡಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ ಕೆಲವು ಆಟೋರಿಕ್ಷಾ ಚಾಲಕರು ಇದೇ ಸಮಯವೆಂದು ಹಿಂದೆ ತೆಗೆದುಕೊಳ್ಳುತ್ತಿದ್ದ ದರಕ್ಕಿಂತ ಹೆಚ್ಚಿನ ದರ ಕೇಳುತ್ತಿದ್ದಾರೆ.

ಹೀಗಾಗಿ ನಗರ ಸಾರಿಗೆ ಓಡಾಟಕ್ಕೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗಾದರೂ ಅವಕಾಶ ನೀಡಿದರೆ ಸಾಮಾನ್ಯ ಜನರ ಓಡಾಟಕ್ಕೆ ಅನುಕೂಲವಾಗುತ್ತದೆ ಎಂದು ಜನ ತಿಳಿಸಿದ್ದಾರೆ.

ಪದಗಂಟು :     
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©