Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ತರಬೇತಿ ವಿಮಾನ ಪತನ ಇಬ್ಬರ ದುರ್ಮರಣ

ಲಘು ವಿಮಾನವೊಂದು ಪತನಗೊಂಡು ಇಬ್ಬರು ಮೃತಪಟ್ಟ ದುರ್ಘಟನೆ ಒಡಿಶಾದ ಡೆಂಕನಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

2020-06-08 05:30:00, ajeyanews.com

Ajeya Imageಒಡಿಶಾ, ಜೂನ್ 8: ಲಘು ವಿಮಾನವೊಂದು ಪತನಗೊಂಡು ಇಬ್ಬರು ಮೃತಪಟ್ಟ ದುರ್ಘಟನೆ ಒಡಿಶಾದ ಡೆಂಕನಲ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ವಿಮಾನದಲ್ಲಿದ್ದ ತರಬೇತಿ ಪೈಲೆಟ್ ಅನಿಸ್ ಫಾತಿಮಾ ಮತ್ತು ಆಕೆಯ ತರಬೇತುದಾರ ಸಂಜೀವ್ ಕುಮಾರ್ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಡೆಂಕಲ್ ಜಿಲ್ಲೆಯ ಕಾಮಕ್ಯ ನಗರದ ಬಳಿ ಬಿರಾಸಲಾ ಪ್ರದೇಶದಲ್ಲಿರುವ ಸರ್ಕಾರಿ ವಿಮಾನಯಾನ ತರಬೇತಿ ಸಂಸ್ಥೆ (ಜಿಎಟಿಐ) ಸಮೀಪದ ಟಮ್ರಾö್ಯನ್‌ನಲ್ಲಿ ತರಬೇತಿ ವಿಮಾನ ಪತನಗೊಂಡಿದೆ. ತೀವ್ರ ಗಾಯಗೊಂಡ ಇವರಿಬ್ಬರನ್ನು ಕಾಮಾಕ್ಯ ನಗರದ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ತಾಂತ್ರಿಕ ದೋಷದಿಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಪದಗಂಟು :   
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©