Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ದೇಶದಲ್ಲಿ ಡ್ರಗ್ಸ್ ಜಿಹಾದ್: ಪ್ರಮೋದ್ ಮುತಾಲಿಕ್

ಕರ್ನಾಟಕದ ಪೊಲೀಸರು ಗಾಂಜಾ ಹಿಡಿದಿದ್ದಲ್ಲ ಈ ಜಾಲವನ್ನು ದೆಹಲಿಯ ವಿಶೇಷ ಪೊಲೀಸರು ಹಿಡಿದಿದ್ದಾರೆ. ರಾಜ್ಯದ ಬೇಹುಗಾರಿಕೆ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಇಲಾಖೆಯೂ ಭಯಾನಕ ಸ್ಕ್ಯಾಂಡಲ್‌ನಲ್ಲಿ ಭಾಗಿಯಾಗಿರುವುದು ದುರಂತ.

2020-09-03 05:30:00, ajeyanews.com

Ajeya Imageದಾವಣಗೆರೆ.ಸೆ.3: 
ದೇಶದಲ್ಲಿ ಡ್ರಗ್ಸ್ ಜಿಹಾದ್ ನಡೆಯುತ್ತಿದೆ. ಯುವ ಸಮೂಹವನ್ನು ಟಾರ್ಗೆಟ್ ಮಾಡಲಾಗುತ್ತಿದ್ದು ಮುಸ್ಲಿಂರಿಂದ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯುವ ಜನಾಂಗದ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ 18 ಬಾರಿ ಗಾಂಜಾ, ಡ್ರಗ್ಸ್ ಜಾಲ ಹಿಡಿಯಲಾಗಿದೆ ಇದರಿಂದ ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ. ರಾಜಕಾರಣಿಗಳು, ಪೊಲೀಸರಿಂದ ಡ್ರಗ್ಸ್ ನಿರ್ಮೂಲನೆ ಅಸಾಧ್ಯ. ರಾಜಕಾರಣಿಗಳು, ಪೊಲೀಸರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವುದು ಇದಕ್ಕೆ ಕಾರಣ. ಕರ್ನಾಟಕದ ಪೊಲೀಸರು ಗಾಂಜಾ ಹಿಡಿದಿದ್ದಲ್ಲ ಈ ಜಾಲವನ್ನು ದೆಹಲಿಯ ವಿಶೇಷ ಪೊಲೀಸರು ಹಿಡಿದಿದ್ದಾರೆ. ರಾಜ್ಯದ ಬೇಹುಗಾರಿಕೆ ಸಂಪೂರ್ಣ ವಿಫಲವಾಗಿದೆ. ಬೇಹುಗಾರಿಕೆ ಇಲಾಖೆಯೂ ಭಯಾನಕ ಸ್ಕ್ಯಾಂಡಲ್‌ನಲ್ಲಿ ಭಾಗಿಯಾಗಿರುವುದು ದುರಂತ. 2009ರಲ್ಲಿ ಮಂಗಳೂರಿನಲ್ಲಿ ಪಬ್ ದಾಳಿ ನಡೆದ ಸಂದರ್ಭದಲ್ಲೇ ನಾನು ಡ್ರಗ್ಸ್, ಸೆಕ್ಸ್ ಜಾಲದ ಬಗ್ಗೆ ಹೇಳಿದ್ದೆ. ಆದರೆ ಯಾವುದೇ ಸರ್ಕಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿಲ್ಲ. ಅಂದೇ ಕಠಿಣ ಕ್ರಮ ಕೈಗೊಂಡಿದ್ದರೆ ಈಗ ಈ ಸಮಸ್ಯೆ ಇರುತ್ತಿರಲಿಲ್ಲ.

ಇಂದ್ರಜಿತ್ ಲಂಕೇಶ್ ನನ್ನ ಮೇಲೆ ಮಾಡಿರುವ ಆರೋಪ ಖಂಡನೀಯ. ಗೌರಿ ಲಂಕೇಶ್ ಅವರೂ ಸಹ ಡ್ರಗ್ಸ್ ಸೇವಿಸುತ್ತಿದ್ದರು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವರು ಯಾವ ಕ್ಲಬ್‌ ಗೆ ಹೋಗುತ್ತಿದ್ದರು ಎಂಬ ಬಗ್ಗೆ ಬೇಕಿದ್ದರೆ ನಾನೇ ಮಾಹಿತಿ ನೀಡುತ್ತೇನೆ.ಯಾರೋ ಒಂದಿಬ್ಬರು ನಟಿಯರು ಡ್ರಗ್ಸ್ ಸೇವಿಸಿದ್ದರೆ ಇಡೀ ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವುದು ಸರಿಯಲ್ಲ. ಆದರೆ ಡ್ರಗ್ಸ್ ಮಾಫಿಯಾ ಸಂಪೂರ್ಣ ನಿರ್ನಾಮವಾಗಬೇಕು ಎಂದರು.

ದಾವಣಗೆರೆಯ ಪೋಲಿಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಸನಾವುಲ್ಲಾ ಎಂಬಾತ ಪವರ್ ಆಫ್ ಪಾಕಿಸ್ತಾನ ಎಂಬ ಘೋಷಣೆ ಕೂಗಿ ದೇಶ ದ್ರೋಹದ ಕೃತ್ಯವೆಸಗಿದ್ದಾನೆ. ಈತನನ್ನು ಇದುವರೆಗೂ ಬಂಧಿಸಿಲ್ಲ. ಎಫ್ ಐ ಆರ್ ದಾಖಲಿಸಿಲ್ಲ.ಸಮಾಜಕ್ಕೆ ಕಂಟಕವಾಗಿರುವ ಇಂತವರನ್ನು ದಾವಣಗೆರೆ ಪೋಲಿಸ್ ಇಲಾಖೆ ರಕ್ಷಿಸಲು ಮುಂದಾಗಿರುವುದು ಖಂಡನೀಯ. ಜಿಲ್ಲಾರಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಇಂತಹ ಸಮಾಜ ಘಾತುಕರನ್ನು ಪೋಷಿಸುತ್ತಿರುವುದು ಸರಿಯಲ್ಲ 24 ಗಂಟೆಯೊಳಗೆ ಬಂಧಿಸದಿದ್ದರೆ ಶ್ರೀರಾಮಸೇನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು.

- ಪ್ರಮೋದ್ ಮುತಾಲಿಕ್



ಪದಗಂಟು :          
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©