Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಈ ಬಡಾವಣೆಯಲ್ಲಿ ರಸ್ತೆ ಇಲ್ಲ, ಒಳಚರಂಡಿಗಳು ಇಲ್ಲ, ಮಳೆಗಾಲದಲ್ಲಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ. ಮಕ್ಕಳು, ಮಹಿಳೆಯರು, ವೃದ್ದರು ಓಡಾಡುವುದೇ ಕಷ್ಟವಾಗುತ್ತದೆ. ಸ್ವಚ್ಛತೆ ಇಲ್ಲ, ಸೊಳ್ಳೆ, ಹಂದಿಗಳ ಕಾಟ ಇದೆ.

2020-09-03 05:30:00, ajeyanews.com

Ajeya Imageಶಿವಮೊಗ್ಗ, ಸೆ. 3:
ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಶರಾವತಿ ಮತ್ತು ಚೈತನ್ಯ ಸ್ತ್ರೀಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.

ಗೋಪಾಲ ಬಡಾವಣೆಯು ನಗರದ ಪ್ರಮುಖ ಜನವಸತಿ ಪ್ರದೇಶವಾಗಿದೆ. ಇಲ್ಲಿನ ಆಲ್ಕೊಳ ವೃತ್ತದಿಂದ ಗೋಪಾಲಗೌಡ 100 ಅಡಿ ರಸ್ತೆ ಕಡೆ ಮೊದಲ ಬಲಭಾಗದ ತಿರುವುನಲ್ಲಿ ಈಗಾಗಲೇ ಹಲವಾರು ಮನೆಗಳು ನಿರ್ಮಾಣಗೊಂಡಿವೆ. ಜೊತೆಗೆ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಚೈತನ್ಯ ಸಮಾಜ ಸೇವಾ ಸಂಸ್ಥೆ, ಸ್ತ್ರೀಬಂಧು ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಅಗಮುಡಿ ಸಮುದಾಯ ಭವನ, ಮಾನಸಧಾರ ಪುನರ್ವಸತಿ ಕೇಂದ್ರ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಇಲ್ಲಿವೆ. ನೂರಾರು ಜನರು ಈ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ ಎಂದು ಆರೋಪಿಸಿದರು.

ಈ ಬಡಾವಣೆಯಲ್ಲಿ ರಸ್ತೆ ಇಲ್ಲ, ಒಳಚರಂಡಿಗಳು ಇಲ್ಲ, ಮಳೆಗಾಲದಲ್ಲಿ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ. ಮಕ್ಕಳು, ಮಹಿಳೆಯರು, ವೃದ್ದರು ಓಡಾಡುವುದೇ ಕಷ್ಟವಾಗುತ್ತದೆ. ಸ್ವಚ್ಛತೆ ಇಲ್ಲ, ಸೊಳ್ಳೆ, ಹಂದಿಗಳ ಕಾಟ ಇದೆ. ಆದ್ದರಿಂದ ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತ ಈ ಬಡಾವಣೆಗೆ ಮೂಲಭೂತ ಸೌಕರ್ಯ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಜ್ಯೋತಿನಾಜ್, ವತ್ಸಲ, ಕವಿತಾ, ಮೇರಿ, ಪ್ರಸಿಲ್ಲಾ, ಶೋಭಾ, ಪ್ರಮೀಳಾ ಸೇರಿದಂತೆ ಹಲವರಿದ್ದರು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©