Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಪಾರಂಪರಿಕ ಕಟ್ಟಡಗಳ ಮಾಹಿತಿ ಡಿಜಿಟಲ್‌ನಲ್ಲಿ

ಸ್ಮಾರಕಗಳ ಯಥಾವತ್ತಾದ 3ಡಿ ವರ್ಚುವಲ್ ವರ್ಲ್ಡ್ ರಚಿಸಬಹುದಾಗಿದೆ. 3ಡಿ ಸ್ಕ್ಯಾನಿಂಗ್ ಸರ್ವೆ ಮಾಡುವ ಸ್ಮಾರಕಗಳ 33ಅಂಶಗಳನ್ನು ಕ್ರೋಢೀಕರಿಸಲಾಗುತ್ತದೆ.

2020-09-16 05:30:00, ajeyanews.com

Ajeya Imageಶಿವಮೊಗ್ಗ, ಸೆ.16:
ಜಿಲ್ಲೆಯ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು, ಅರಮನೆ, ದೇವಸ್ಥಾನಗಳನ್ನು 3ಡಿ ಲೇಸರ್ ತಂತ್ರಜ್ಞಾನ ಬಳಸಿ ಡಿಜಿಟಲ್ ಗೊಳಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಇಂದು ಶಿವಪ್ಪ ನಾಯಕ ಅರಮನೆ ಯಲ್ಲಿ ಚಾಲನೆ ನೀಡಿದರು.

ಜಿಲ್ಲೆಯಲ್ಲಿ 12 ಪಾರಂಪರಿಕ ಕಟ್ಟಡ, ಅರಮನೆ, ಸ್ಮಾರಕಗಳನ್ನು ಈ ಕಾರ್ಯಕ್ಕಾಗಿ ಗುರುತಿಸಲಾಗಿದೆ. ಇವುಗಳಲ್ಲಿ ಶಿವಮೊಗ್ಗ ನಗರದ ಶಿವಪ್ಪ ನಾಯಕ ಅರಮನೆ, ಕೋಟೆ ಆಂಜನೇಯ ದೇವಾಲಯ, ಭೀಮೇಶ್ವರ ದೇವಾಲಯ, ಕುಸ್ಕೂರಿನ ಭೀಮೇಶ್ವರ ದೇವಾಲಯ, ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯ, ಹೊಸನಗರ ತಾಲೂಕಿನ ಸಾಲಗೇರಿಯ ಉಮಾಪತಿ ದೇವಾಲಯ, ಶಿವಪ್ಪ ನಾಯಕನ ಗೋಪುರ, ಶಿಕಾರಿಪುರ-ಚಿಕ್ಕಮಾಗಡಿ ಜೈನಬಸ್ತಿ, ನರಸಾಪುರ ಬಸದಿ, ಸೊರಬ ತಾಲೂಕಿನ ಪುರ ಗ್ರಾಮದ ಸೋಮೇಶ್ವರ ದೇವಾಲಯ, ದವನಿ ಬೈಲಿನ ಕಪಿಲೇಶ್ವರ ದೇವಾಲಯಗಳು ಸೇರಿವೆ ಎಂದರು.

ಮುಂದಿನ ದಿನಗಳಲ್ಲಿ ಸ್ಮಾರಕಗಳು ಯಾವುದೇ ಕಾರಣಕ್ಕೂ ಹಾನಿಗೊಳಗಾದರೆ, ಕಟ್ಟಡಗಳ ಮರು ನಿರ್ಮಾಣಕ್ಕೆ ಈ ತಂತ್ರಜ್ಞಾನ ಸಹಕಾರಿಯಾಗಿದೆ. ಇದರಿಂದ ಸ್ಮಾರಕಗಳ ಯಥಾವತ್ತಾದ 3ಡಿ ವರ್ಚುವಲ್ ವರ್ಲ್ಡ್ ರಚಿಸಬಹುದಾಗಿದೆ. 3ಡಿ ಸ್ಕ್ಯಾನಿಂಗ್ ಸರ್ವೆ ಮಾಡುವ ಸ್ಮಾರಕಗಳ 33ಅಂಶಗಳನ್ನು ಕ್ರೋಢೀಕರಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ ಸ್ಮಾರಕಗಳ ಅಳತೆ, ಆಳ, ಅಗಲ, ಸ್ಮಾರಕಕ್ಕೆ ಬಳಸಲಾಗಿರುವ ಸಾಮಾಗ್ರಿ, ನಿರ್ಮಾಣಗೊಂಡ ವರ್ಷ, ಯಾರ ಕಾಲದಲ್ಲಿ ನಿರ್ಮಾಣಗೊಂಡಿದೆ ತಿಳಿಯಲಿದೆ ಎಂದರು.

ವರ್ಷ ಮತ್ತು ಐತಿಹಾಸಿಕ ವಿವರಗಳು, ವಾಸ್ತುಶಿಲ್ಪದ ಶೈಲಿಯನ್ನು ಸಹ ಕ್ರೋಢೀಕರಿಸಿ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಜಿಯೋ ಸ್ಪೇಶಿಯಲ್ ತಂತ್ರಜ್ಞಾನವನ್ನು ಇದರಲ್ಲಿ ಅಡಕಗೊಳಿಸಿ, ಸ್ಮಾರಕಗಳ ಜಿಪಿಎಸ್ ಲೊಕೇಶನ್, ಛಾಯಾಚಿತ್ರ ಇರಲಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿದಾಗ ಹತ್ತಿರದ ಊರು, ತಲುಪುವ ವ್ಯವಸ್ಥೆ ಮುಂತಾದ ವಿವರಗಳು ಸಹ ಪ್ರವಾಸಿಗರಿಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಪೂರ್ಣಿಮಾ ಇದ್ದರು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©