Sunday 25 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಪೌರ ಕಾರ್ಮಿಕರು ನಾಡಿನ ರಕ್ಷಕರು: ಮೇಯರ್ ಸುವರ್ಣಾ ಶಂಕರ್

ಪೌರ ಕಾರ್ಮಿಕರು ವರ್ಷಪೂರ್ತಿ ಕೆಲವೊಮ್ಮೆ ರಜಾ ಇಲ್ಲದೇ ಸಾರ್ವಜನಿಕರ ಆರೋಗ್ಯಕ್ಕಾಗಿ ತಮ್ಮ ಸೇವೆ ನೀಡುತ್ತಿದ್ದಾರೆ. ಕೋವಿಡ್-19ರ ವೇಳೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ.

2020-09-23 05:30:00, ajeyanews.com

Ajeya Imageಶಿವಮೊಗ್ಗ, ಸೆ.23:
ಪೌರ ಕಾರ್ಮಿಕರು ಈ ನಾಡಿನ ರಕ್ಷಕರು. ನಗರದ ನೈರ್ಮಲ್ಯ ಹಾಗೂ ಜನತೆಯ ಆರೋಗ್ಯ ಕಾಪಾಡುವಲ್ಲಿ ಅವರು ಶ್ರೇಷ್ಠತೆ ಮೆರೆಯುತ್ತಿದ್ದಾರೆ. ಪೌರ ಕಾರ್ಮಿಕರು ಕೊರೋನಾ ವಾರಿಯರ್ಸ್ ಆಗಿದ್ಧಾರೆ ಎಂದು ಮೇಯರ್ ಸುವರ್ಣಾ ಶಂಕರ್ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ನಿರ್ಮಿಸಿದ್ದ ದಿ. ಚನ್ನಮ್ಮ ಮತ್ತು ದಿ.ಪಾಪಾನಾಯ್ಕ ವೇದಿಕೆಯಲ್ಲಿ ಇಂದು ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಆಶಯದಿಂದ ಪೌರ ಕಾರ್ಮಿಕರ ಬದುಕನ್ನು ಘನತೆಗೊಳಿಸಬೇಕಾಗಿದೆ. ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಮಹಾನಗರಪಾಲಿಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಅವರ ಬೇಡಿಕೆಗಳನ್ನು ತಾಯ್ತನದಿಂದ ಕಾಣಬೇಕು. ನೇರ ಪಾವತಿ ಯೋಜನೆಯಡಿ ನೇಮಕಗೊಂಡಿರುವ ಗುತ್ತಿಗೆ ಪೌರ ಕಾರ್ಮಿಕರನ್ನು ರೋಸ್ಟರ್ ಪದ್ದತಿಯನ್ನು ಹೊರತುಪಡಿಸಿ ಖಾಯಂಗೊಳಿಸಬೇಕು. 20 ವರ್ಷಕ್ಕೂ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವವರನ್ನು ಮತ್ತು ಒಳಚರಂಡಿ ವಿಭಾಗದ ಕಾರ್ಮಿಕರನ್ನು ಖಾಯಂ ಮಾಡಬೇಕು.
- ಎನ್. ಗೋವಿಂದ, ಪ್ರಧಾನ ಕಾರ್ಯದರ್ಶಿ, ಪೌರ ಕಾರ್ಮಿಕರ ಸಂಘ


ಇಬ್ಬರು ಪೌರ ಕಾರ್ಮಿಕರ ಬಲಿದಾನವನ್ನು ನಾವು ಮರೆಯಲು ಸಾಧ್ಯವಿಲ್ಲ. ಸರ್ಕಾರದಿಂದ ಸಿಗುವ ಅನುದಾನದ ಹಣದ ಜೊತೆಗೆ ಪಾಲಿಕೆ ವತಿಯಿಂದ ತಲಾ 3 ಲಕ್ಷ ಹಾಗೂ ಕುಟುಂಬದ ಒಬ್ಬರಿಗೆ ಕೆಲಸ ಮತ್ತು ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಘೋಷಿಸಿದ ಅವರು, ರವಿ ಹುಟ್ಟುವ ಮೊದಲೇ ನಗರ ಸ್ವಚ್ಛತೆಯ ಕಾಯಕ ಮಾಡುವ ಪೌರ ಕಾರ್ಮಿಕರಿಗೆ ನನ್ನ ಭಕ್ತಿಪೂರ್ವಕ ನಮಸ್ಕಾರ. ಅವರು ಕೊರೋನಾ ವಾರಿಯರ್ಸ್ ಆಗಿದ್ದಾರೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಅಭಿನಂದಿಸುವುದು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಪೌರ ಕಾರ್ಮಿಕರು ವರ್ಷಪೂರ್ತಿ ಕೆಲವೊಮ್ಮೆ ರಜಾ ಇಲ್ಲದೇ ಸಾರ್ವಜನಿಕರ ಆರೋಗ್ಯಕ್ಕಾಗಿ ತಮ್ಮ ಸೇವೆ ನೀಡುತ್ತಿದ್ದಾರೆ. ಕೋವಿಡ್-19ರ ವೇಳೆಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ಕಾರ್ಯಕ್ರಮ ಮಾಡಲಾಗಿದೆ ಎಂದರು.

Ajeya Imageಪೌರ ಕಾರ್ಮಿಕರನ್ನು ಗೌರವಿಸಲಾಯಿತು ಮತ್ತು ಅವರ ಕಾಲಿಗೆ ನಮಸ್ಕರಿಸಲಾಯಿತು. ಹಾಗೂ ಎಲ್ಲ ಪೌರ ಕಾರ್ಮಿಕರಿಗೂ ಬೆಳ್ಳಿ ದೀಪಗಳನ್ನು ವಿತರಿಸಲಾಯಿತು.

ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದ ಪ್ರಾಸ್ತಾವಿಕ ಮಾತನಾಡಿದರು. ನೌಕರರ ಸಂಘದ ಅಧ್ಯಕ್ಷ ಎನ್.ಮಾರಪ್ಪ, ಉಪಮೇಯರ್ ಸುರೇಖಾ ಮುರಳೀಧರ್, ಎಸ್.ಎನ್. ಚನ್ನಬಸಪ್ಪ, ಹೆಚ್.ಸಿ. ಯೋಗೀಶ್, ಎಸ್.ಜ್ಞಾನೇಶ್ವರ್, ಪ್ರಭಾಕರ್, ವಿಶ್ವಾಸ್, ಆರ್.ಸಿ. ನಾಯ್ಕ, ವಿಶ್ವನಾಥ್, ರವಿಕುಮಾರ್, ಸುನಿತಾ ಕೆ.ವಿ. ಅಣ್ಣಪ್ಪ, ರೇಖಾ ರಂಗನಾಥ್, ಮಂಜುಳಾ ಶಿವಣ್ಣ, ಮೆಹಕ್ ಷರೀಫ್ ಸೇರಿದಂತೆ ಹಲವರು ಹಾಜರಿದ್ದರು.

ಹರ್ಷಿತಾ ಪ್ರಾರ್ಥಿಸಿದರು, ವೇಣುಗೋಪಾಲ್ ಸ್ವಾಗತಿಸಿದರು. 


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©