Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಪಿಎಂ ಸ್ವಾನಿಧಿ ಯೋಜನೆಯ ಬಗ್ಗೆ ಕೆನರಾ ಬ್ಯಾಂಕ್ ರ‍್ಯಾಲಿ

ಬೀದಿ ಬದಿ ವ್ಯಾಪಾರಿಗಳಿಗೆ,ತರಕಾರಿ ಮಾರಾಟಗಾರರಿಗೆ, ಸಣ್ಣ ಉದ್ಯಮಿಗಳಿಗೆ ಯೋಜನೆ ಸಹಾಯವಾಗಲಿದೆ. ಶಿವಮೊಗ್ಗ ಕೆನರಾ ಬ್ಯಾಂಕ್ ವತಿಯಿಂದ ಸುಮಾರು 101 ಜನರಿಗೆ 1.10 ಕೋಟಿ ರೂಪಾಯಿ ಸ್ವಾನಿಧಿ ಯೋಜನೆಅಡಿ ಸಾಲ ನೀಡಲಾಗಿದೆ

2020-09-23 05:30:00, ajeyanews.com

Ajeya Imageಶಿವಮೊಗ್ಗ, ಸೆ.23:
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ವತಿಯಿಂದ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣಗಳ ಸಾಲ ಹಾಗೂ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಬಗ್ಗೆ ಜನರಿಗೆ ಹಾಗೂ ರೈತರಿಗೆ ಅರಿವು ಮೂಡಿಸಲು ಕೆನರಾ ಬ್ಯಾಂಕ್ ಸಿಬ್ಬಂದಿ ನಗರದಲ್ಲಿ ಹಲವಾರು ಕಡೆ ರ‍್ಯಾಲಿ ನಡೆಸಿದರು.

ರ‍್ಯಾಲಿಗೆ ಜಿಲ್ಲಾ ಪಂಚಾಯ್ತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ವೈಶಾಲಿ ಅವರು ಹಾಗೂ ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರ್ ಕೋಠಾರಿ ಅವರು ಚಾಲನೆನೀಡಿದರು. 

ಆನಂತರ ಮಾತನಾಡಿದ ಸುಧಾಕರ್ ಅವರು ಪಿಎಂ ಸ್ವಾನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ,ತರಕಾರಿ ಮಾರಾಟಗಾರರಿಗೆ, ಸಣ್ಣ ಉದ್ಯಮಿಗಳಿಗೆ ಯೋಜನೆ ಸಹಾಯವಾಗಲಿದೆ. ಶಿವಮೊಗ್ಗ ಕೆನರಾ ಬ್ಯಾಂಕ್ ವತಿಯಿಂದ ಸುಮಾರು 101 ಜನರಿಗೆ 1.10 ಕೋಟಿ ರೂಪಾಯಿ ಸ್ವಾನಿಧಿ ಯೋಜನೆಅಡಿ ಸಾಲ ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಕೃಷಿ ಚಟುವಟಿಕೆಗೆ ಹಾಗೂ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಸಲುವಾಗಿ ಸುಮಾರು 1182 ರೈತರಿಗೆ 3 ಕೋಟಿ ರೂ. ಸಾಲ ನೀಡಲಾಗಿದ್ದು, ಪ್ರಧಾನಮಂತ್ರಿ ಜನಧನ ಖಾತೆಯ 760 ಗ್ರಾಹಕರಿಗೆ 9 ಕೋಟಿ ರೂ. ಓಡಿ ನೀಡಲಾಗಿದೆ ಎಂದರು.

ಪಿಎಂ ಸ್ವಾನಿಧಿ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©