Wednesday 28 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಸೆ.25: ತೆರಿಗೆ ಕಾಯ್ದೆ ತಿದ್ದುಪಡಿ ಬಗ್ಗೆ ವರ್ತಕರಿಗೆ ಕಾರ್ಯಾಗಾರ

ಹಿಂದಿನ ಆರ್ಥಿಕ ವರ್ಷದಲ್ಲಿ 10 ಕೋಟಿ ರೂ. ಮಿಕ್ಕಿ ವಹಿವಾಟು ನಡೆಸಿದವರಿಗೆ ಸೆಕ್ಷನ್ 206ಸಿ(ಐಹೆಚ್)ಟಿಸಿಎಚ್ ಕಡಿತಗೊಳಿಸುವ ಬಗ್ಗೆ ಮಾಹಿತಿ ಹಾಗೂ ಸೆಕ್ಷನ್ 194ಎನ್ ಅನ್ವಯವಾಗುವಂತೆ ಖಾತೆಯಿಂದ ನಗದು ಹಿಂಪಡೆಯುವ ಬಗ್ಗೆ ಮಾಹಿತಿ ಕಾರ್ಯಾಗಾರ

2020-09-24 05:30:00, ajeyanews.com

Ajeya Imageಶಿವಮೊಗ್ಗ, ಸೆ.24:
ತೆರಿಗೆ ಕಾಯ್ದೆಯಲ್ಲಿನ ಇತ್ತೀಚಿನ ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಹಿಂದಿನ ಆರ್ಥಿಕ ವರ್ಷದಲ್ಲಿ 10 ಕೋಟಿ ರೂ. ಮಿಕ್ಕಿ ವಹಿವಾಟು ನಡೆಸಿದವರಿಗೆ ಸೆಕ್ಷನ್ 206ಸಿ(ಐಹೆಚ್)ಟಿಸಿಎಚ್ ಕಡಿತಗೊಳಿಸುವ ಬಗ್ಗೆ ಮಾಹಿತಿ ಹಾಗೂ ಸೆಕ್ಷನ್ 194ಎನ್ ಅನ್ವಯವಾಗುವಂತೆ ಖಾತೆಯಿಂದ ನಗದು ಹಿಂಪಡೆಯುವ ಬಗ್ಗೆ ಮಾಹಿತಿ ಕಾರ್ಯಾಗಾರ ನಾಳೆ ಸಂಜೆ 5 ಗಂಟೆಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆದಾಯ ಏರ್ಪಡಿಸಲಾಗಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಲೆಕ್ಕಪರಿಶೋಧಕ ಕೆ.ಲಕ್ಷ್ಮಣರಾವ್ ಹಾಗೂ ಎನ್.ರಾಮಚಂದ್ರ ಭಾಗವಹಿಸಲಿದ್ದಾರೆ. ಸಂಬಂಧಪಟ್ಟ ವರ್ತಕರು ಹಾಗೂ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಬೇಕು ಎಂದು ಸಂಘದ ಪರವಾಗಿ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಯು.ಮಧುಸೂದನ್ ಐತಾಳ್ ತಿಳಿಸಿದ್ದಾರೆ.


ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©