Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಹೊಲದಲ್ಲೇ ಕೊಳೆತ ಈರುಳ್ಳಿ; ನಷ್ಟದಲ್ಲಿ ರೈತರು

ಅಪಾರ ಪ್ರಮಾಣದ ರೈತರು ಬೆಳೆದ ಈರುಳ್ಳಿ ಗೆಡ್ಡೆ ತಮ್ಮ ಹೊಲದಲ್ಲಿಯೇ ಕೊಳೆತು ಹೋಗಿದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಯಂತ್ರಗಳ ಸಹಾಯದಿಂದ ನಾಶಪಡಿಸಿ ಮತ್ತು ದನಕರುಗಳನ್ನು ಬಿಟ್ಟು ಮೇಯಿಸುವ ಅಂತ ಸ್ಥಿತಿ ನಿರ್ಮಾಣವಾಗಿದೆ

2020-09-24 05:30:00, ajeyanews.com

Ajeya Imageದಾವಣಗೆರೆ, ಸೆ.24:
ಹೊಲದಲ್ಲಿ ಈರುಳ್ಳಿ ಗೆಡ್ಡೆ ಕೊಳೆತು ಹೋಗುತ್ತಿರುವುದು ಮತ್ತು ಈರುಳ್ಳಿ ಗೆಡ್ಡೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಕಾರಣ ಮನನೊಂದ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಕ್ಷೇತ್ರದ ತಾಲೂಕು ಪಂಚಾಯ್ತಿ ಸದಸ್ಯ ಟಿ.ಬಸವರಾಜ್ ಅವರು ನಮ್ಮ ಜಮೀನಿನಲ್ಲಿ ಈರುಳ್ಳಿ ಗೆಡ್ಡೆಯನ್ನು ಟ್ರ್ಯಾಕ್ಟರ್ ಸಹಾಯದಿಂದ ಜಮೀನಿನಲ್ಲೇ ನಾಶ ಪಡಿಸುತ್ತಿದ್ದಾರೆ.

ದೊಣ್ಣೆಹಳ್ಳಿ ತಾಲೂಕು ಪಂಚಾಯತಿ ಸದಸ್ಯರಾದ ಬಸವರಾಜ್ ಅವರು ಸುಮಾರು 2 ಎಕರೆ 20 ಗುಂಟೆ ಜಮೀನಿನಲ್ಲಿ ಈರುಳ್ಳಿಯನ್ನು ಬಿತ್ತನೆ ಮಾಡಿದ್ದರು ಈ ಬೆಳೆಯನ್ನು ಬಿತ್ತಲು ಸುಮಾರು 40 ರಿಂದ 60 ಸಾವಿರ ರೂಗಳು ಇಲ್ಲಿವರೆಗೆ ವೆಚ್ಚಮಾಡಿದ್ದಾರೆ. ಆದರೆ ತಾವು ಬೆಳೆದ ಈರುಳ್ಳಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಈ ವರ್ಷ ಬೆಳೆದ ಈರುಳ್ಳಿ ಬೆಳೆಗಳಿಗೆ ಸುಳಿ ರೋಗ. ಮತ್ತು ಕೋತಿ ರೋಗ. ಬುಡುಸು ರೋಗ. ಕೊಳೆರೋಗ ಈರುಳ್ಳಿ ಬೆಳೆಗೆ ಈ ವರ್ಷ ಅಂಟಿಕೊಂಡಿವೆ.ಆದರೆ ನಾವು ಸಾಕಷ್ಟು ಬಾರಿ ಔಷಧಿ ಸಿಂಪಡಣೆ ಮಾಡಿದರು ರೋಗ ನಿಯಂತ್ರಣಕ್ಕೆ ಬಂದಿಲ್ಲ. ನಾವು ಸಾಲಸೋಲ ಮಾಡಿ ದುಬಾರಿ ದರದಲ್ಲಿ ಈರುಳ್ಳಿ ಬೀಜವನ್ನು ತಂದು ಬಿತ್ತನೆ ಮಾಡಿದ್ದೇವೆ. ಹಿಂದಿನ ವರ್ಷ ಸಹ ಈರುಳ್ಳಿ ಬೆಳೆಯು ನಮಗೆ ಸರಿಯಾದ ರೀತಿ ಬೆಲೆ ಸಿಗಲಿಲ್ಲ ಎಂದು ಅಳಲುತೋಡಿಕೊಂಡಿದ್ದಾರೆ. 

ಸುಮಾರು 300ರಿಂದ 400 ಪಾಕೆಟ್ ನಲ್ಲಿ ಈರುಳ್ಳಿ ಕೊಳೆತು ಹೋಗುತ್ತಿರುವುದರಿಂದ ಹಾಗೂ ಸರಿಯಾದ ರೀತಿ ದರ ಸಿಗದ ಕಾರಣ ಜಮೀನಿನಲ್ಲಿ ಬಿಟ್ಟು ಟ್ರ‍್ಯಾಕ್ಟರ್ ಸಹಾಯದಿಂದ ಉಳುಮೆ ಮಾಡಿಸುತ್ತಿದ್ದೇನೆ. ಈ ವರ್ಷ ನಮ್ಮ ತಾಲೂಕಿನಲ್ಲಿ ರೈತರು ಸಾಲದ ದವಡೆಯಲ್ಲಿ ಸಿಲುಕಿ ಅಯ್ಯೋ ಎನ್ನುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ನಾವು ಕೊಳೆತು ಹೋದ ಈರುಳ್ಳಿಯನ್ನು ನೋಡಿ ಸಂಪೂರ್ಣ ಗೆಡ್ಡೆ ಕೊಳೆತು ಹೋಗಿದೆ. ಮರೆನಹಳ್ಳಿ ಸೇರಿದಂತೆ ಜಗಳೂರು ತಾಲೂಕಿನಾದ್ಯಂತ ಅಪಾರ ಪ್ರಮಾಣದ ರೈತರು ಬೆಳೆದ ಈರುಳ್ಳಿ ಗೆಡ್ಡೆ ತಮ್ಮ ಹೊಲದಲ್ಲಿಯೇ ಕೊಳೆತು ಹೋಗಿದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಯಂತ್ರಗಳ ಸಹಾಯದಿಂದ ನಾಶಪಡಿಸಿ ಮತ್ತು ದನಕರುಗಳನ್ನು ಬಿಟ್ಟು ಮೇಯಿಸುವ ಅಂತ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ. 

ಕೆಲವು ದಿನಗಳಿಂದ ಮಳೆ ಹೆಚ್ಚಾಗಿ ಹೊಲದಲ್ಲಿ ನೀರು ತುಂಬಿ ಈರುಳ್ಳಿ ಗೆಡ್ಡೆ ಕೊಳೆತು ಹೋಗಿದ್ದರು ಸಹ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿಲ್ಲ ಎಂದು ದೊಣ್ಣೆಹಳ್ಳಿ ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. 

ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿರುವ ರೈತರ ಜಮೀನಿಗೆ ಬೇಟಿ ನೀಡಿ ರೈತರ ಸಮಸ್ಯೆಗಳನ್ನು ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸರ್ಕಾರದಿಂದ ಬೆಳೆ ನಷ್ಟ ಪರಿಹಾರವನ್ನು ಶೀಘ್ರವೇ ತರಿಸಿಕೊಡಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ. 

ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©