Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಅಕ್ರಮವಾಗಿ ವಂತಿಕೆ ಸಂಗ್ರಹ; ಕ್ರಮಕ್ಕೆ ಆಗ್ರಹ

ಸಾರ್ವಜನಿಕರಿಂದ ವಂತಿಗೆ ಹಣ ಸಂಗ್ರಹಿಸಿದ್ದಾರೆ. ಧಾರ್ಮಿಕ ಸಂಸ್ಥೆಗೆ ನಂಬಿಕೆ ದ್ರೋಹ ಎಸಗಿದ್ದಾರೆ. ವಕ್ಫ್ ಬೋರ್ಡಿಗೆ ಮೋಸ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ

2020-09-24 05:30:00, ajeyanews.com

Ajeya Imageಮಲೇಬೆನ್ನೂರು, ಸೆ.24;
ಇಲ್ಲಿನ ಅಲ್ ಜಾಮಿಯಾತ್ ಉಲ್ ಹಬಿಬಿಯ ರಜಾಯೆ ಮುಸ್ತಫಾ ಅರಬ್ಬಿ ಮದರಸಾ ಹೆಸರಿನಲ್ಲಿ ಅಕ್ರಮವಾಗಿ ಐದು ಜನರು ವಂತಿಗೆ ಸಂಗ್ರಹಿಸಿದ್ದಾರೆ ಎಂದು ಜಾಮಿಯಾ ಮಸೀದಿ ಆಡಳಿತಾಧಿಕಾರಿ ಅಬ್ದುಲ್ ಲತೀಫ್ ಪೊಲೀಸರಿಗೆ ದೂರು ನೀಡಿದ್ದಾರೆ.

ರಂಜಾನ್ ಸಮಯದಲ್ಲಿ ಮದರಸಾ ಹೆಸರಿನಲ್ಲಿ ಬಿಲ್ ಬುಕ್ ಮುದ್ರಿಸಿ ಪಟ್ಟಣದ ಜಾಮಿಯಾ ಮಸೀದಿ ಯ ಹಿಂದಿನ ಉಚ್ಚಾಟಿತ ಸಮಿತಿ ಅದ್ಯಕ್ಷ ಎಂ.ಬಿ.ರೋಷನ್ ಸದಸ್ಯರಾದ ಫಾಜಿಲ್ ಖಾನ್, ಕೆ. ರಫೀಉಲ್ಲಾ, ಹಾಗೂ ರಹೀಂ ಉಲ್ಲಾ, ಮೌಲಾನಾ ಅಬ್ದುಲ್ ರಷೀದ್ ಎಂಬುವವರು ಸಾರ್ವಜನಿಕರಿಂದ ವಂತಿಗೆ ಹಣ ಸಂಗ್ರಹಿಸಿದ್ದಾರೆ. ಧಾರ್ಮಿಕ ಸಂಸ್ಥೆಗೆ ನಂಬಿಕೆ ದ್ರೋಹ ಎಸಗಿದ್ದಾರೆ. ವಕ್ಫ್ ಬೋರ್ಡಿಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಏಪ್ರಿಲ್ 25 ಹಾಗೂ ಮೇ 30ರ ನಡುವೆ ಘಟನೆ ನಡೆದಿದೆ ಎಂದು ಆರೋಪಿಸಿದ್ದು,  ಪ್ರಕರಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©