Wednesday 28 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಸಾಂಸದರ ಅಮಾನತ್ತು ಹಿಂಪಡೆಯಿರಿ: ಆಮ್ ಆದ್ಮಿ

ಆಮ್ ಆದ್ಮಿ ಪಕ್ಷದ ಸಾಂಸದರಾದ ಸಂಜಯ್ ಸಿಂಗ್ ಸೇರಿದಂತೆ 8 ಸದಸ್ಯರನ್ನು ಸಂಸತ್ ನಿಂದ ಒಂದು ವಾರ ಅಮಾನತುಗೊಳಿಸಿರುವುದು ಒಳ್ಳೆಯ ನಡೆಯಲ್ಲ.ಇದು ವಿರೋಧಿಗಳ ಬಾಯಿ ಮುಚ್ಚಿಸುವ ಸರ್ಕಾರದ ಸರ್ವಾಧಿಕಾರಿ ವರ್ತನೆ.

2020-09-25 05:30:00, ajeyanews.com

Ajeya Image
ಶಿವಮೊಗ್ಗ, ಸೆ.25: 
ಕೃಷಿ ಮಸೂದೆಗಳನ್ನು ವಿರೋಧಿಸಿದ ಸಾಂಸದರನ್ನು ಸಂಸತ್‌ನಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಅಮ್ ಆದ್ಮಿ ಪಾರ್ಟಿ ಜಿಲ್ಲಾಧಿಕಾರಿಗಳಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.

ರಾಜ್ಯಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಕೃಷಿ ಮಸೂದೆಗಳನ್ನು ಅಸಾಂವಿಧಾನಿಕ ರೀತಿಯಲ್ಲಿ ಅಂಗೀಕರಿಸಿರುವುದು ಸರಿಯಲ್ಲ. ಇದನ್ನು ಪ್ರಶ್ನೆ ಮಾಡಿದ ಆಮ್ ಆದ್ಮಿ ಪಕ್ಷದ ಸಾಂಸದರಾದ ಸಂಜಯ್ ಸಿಂಗ್ ಸೇರಿದಂತೆ 8 ಸದಸ್ಯರನ್ನು ಸಂಸತ್ ನಿಂದ ಒಂದು ವಾರ ಅಮಾನತುಗೊಳಿಸಿರುವುದು ಒಳ್ಳೆಯ ನಡೆಯಲ್ಲ.ಇದು ವಿರೋಧಿಗಳ ಬಾಯಿ ಮುಚ್ಚಿಸುವ ಸರ್ಕಾರದ ಸರ್ವಾಧಿಕಾರಿ ವರ್ತನೆ. ಪ್ರಜಾಪ್ರಭುತ್ವ ಮೌಲ್ಯಗಳು ಉಳಿಯಬೇಕು.ಸಂಸದೀಯ ಸಂಪ್ರದಾಯಗಳನ್ನು ಉಳಿಸುವ ಜವಾಬ್ದಾರಿ ರಾಷ್ಟ್ರಪತಿಗಳಾದ ತಮ್ಮ ಮೇಲಿದೆ. ಆದ್ದರಿಂದ ರೈತ ಮಸೂದೆಗಳನ್ನು ಅಂಗೀಕರಿಸಬಾರದು ಮತ್ತು ಸಾಂಸದರ ಆದೇಶವನ್ನು ರದ್ದು ಮಾಡುವಂತೆ ರಾಜ್ಯಸಭೆ ಸಭಾಧ್ಯಕ್ಷರಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಅಮ್‌ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಹೆಚ್.ರವಿಕುಮಾರ್, ದಿನೇಶ್ ಕಾಂತ, ಸುರೇಶ್ ಬಿ.ಕೋಟೇಕರ್ ಸೇರಿದಂತೆ ಹಲವರಿದ್ದರು.

ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©