Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ಸನ್ಮಾನ

2020-09-25 05:30:00, ajeyanews.com

Ajeya Imageಶಿವಮೊಗ್ಗ, ಸೆ.25:
ಹೊಯ್ಸಳ ಕರ್ನಾಟಕ ಬ್ರಾಹ್ಮಣ ಸಂಘದ ವತಿಯಿಂದ ನಿನ್ನೆ ಹೊಯ್ಸಳ ಸೊಸೈಟಿ ಆವರಣದಲ್ಲಿ ಮಹಾನಗರಪಾಲಿಕೆ ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಆರಾಧನಾ ಸಮಿತಿ ಅಧ್ಯಕ್ಷ ಬಾ.ರಾ.ಮಧುಸೂದನ್, ನಗರಾಭಿವೃಧ್ದಿ ಪ್ರಾಧಿಕಾರ ಸದಸ್ಯರಾದ ಉಮಾಮೂರ್ತಿ, ಪ್ರಶಸ್ತಿ ಪುರಸ್ಕೃತರಾದ ಪ್ರೇಮಾ ಆನಂದ್, ಡಾಕ್ಟರೇಟ್ ಪುರಸ್ಕೃತ ಮಂಜುಳಾ ನಾಗರಾಜ್, ಆರಾಧನಾ ಸಮಿತಿ ಸದಸ್ಯ ಲಕ್ಷ್ಮೀ ಶ್ರೀನಿವಾಸ್, ಆಶ್ರಯ ಸಮಿತಿ ಸದಸ್ಯ ಯಶೋಧರ ಇವರುಗಳನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಎನ್.ಆರ್. ಮಂಜುಳಾ ಅವರು ಸಂಗ್ರಹಿಸಿದ ಪುರಂದರದಾಸರ ಕೀರ್ತನೆಗಳ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಹೊಯ್ಸಳ ಸೊಸೈಟಿಯ ಪದಾಧಿಕಾರಿಗಳಾದ ಎಂ.ಶಂಕರ್, ವೇಣುಗೋಪಾಲ್, ಯು.ಎಸ್. ಕೇಶವಮೂರ್ತಿ, ರಘುರಾಮ್, ಕೃಷ್ಣರಾವ್ ಸೇರಿದಂತೆ ಸೊಸೈಟಿ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©