Wednesday 28 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಶಿವಮೊಗ್ಗ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ

ರೈತರ ಪರವಾಗಿ ನಡೆದ ಪ್ರತಿಭಟನೆ ಈಗ ನಗರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ನಿಯಮ ಹಾಗೂ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ್ದು ಇದು ಯಾರ ಜಾಣ ಕುರುಡು ಎಂದು ಅರ್ಥವಾಗದಂತಾಗಿದೆ.

2020-09-28 05:30:00, ajeyanews.com

Ajeya Imageಶಿವಮೊಗ್ಗ, ಸೆ.28:
ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸಿ ರೈತ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಇಂದು ಕರೆ ನೀಡಿದ್ದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಂದ್ ಹಿನ್ನೆಲೆಯಲ್ಲಿ ಗಾಂಧಿಬಜಾರ್, ನೆಹರು ರಸ್ತೆ, ಬಿಹೆಚ್ ರಸ್ತೆ, ಗೋಪಿ ಸರ್ಕಲ್, ಎನ್‌ ಟಿ ರಸ್ತೆ, ದುರ್ಗಿಗುಡಿ ಮುಂತಾದ ಪ್ರಮುಖ ರಸ್ತೆಗಳ ಅಂಗಡಿ ಮುಂಗಟ್ಟುಗಳು ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ಬಂದ್ ಆಗಿದ್ದವು. ಆನಂತರ ನಿಧಾನವಾಗಿ ವ್ಯಾಪಾರ ವಹಿವಾಟಿಗೆ ತೆರದುಕೊಂಡಿತು.  ಕೆ ಎಸ್‌ ಆರ್‌ ಟಿ ಸಿ, ಖಾಸಗಿ ಬಸ್‌ ಗಳ ಸಂಚಾರ ವಿರಳವಾಗಿತ್ತು. ರಸ್ತೆಯಲ್ಲಿ ಆಟೋಗಳ ಸಂಚಾರ ಕಡಿಮೆಯಿತ್ತು. 

Ajeya Image

ಗಾಳಿಗೆ ತೂರಿದ ಕೋವಿಡ್ ನಿಯಮ

ರೈತರ ಪರವಾಗಿ ನಡೆದ ಪ್ರತಿಭಟನೆ ಈಗ ನಗರದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ನಿಯಮ ಹಾಗೂ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿದ್ದು ಇದು ಯಾರ ಜಾಣ ಕುರುಡು ಎಂದು ಅರ್ಥವಾಗದಂತಾಗಿದೆ. ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದವರ ನಡುವೆ ಸಾಮಾಜಿಕ ಅಂತರವಿರಲಿಲ್ಲ. ಇದರ ಜೊತೆಗೆ ಮುಂಚೂಣಿ ಮುಖಂಡರೇ ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ತಳೆದಿದ್ದರು. ಕೆಲವರಿಗೆ ಮಾಸ್ಕ್ ಇತ್ತಾದರೂ ಅದು, ಬಾಯಿ, ಮೂಗು ಮುಚ್ಚದೇ ಕುತ್ತಿಗೆಗಷ್ಟೇ ಸೀಮಿತವಾಗಿತ್ತು. ದ್ವಿಚಕ್ರ ವಾಹನ ರ‍್ಯಾಲಿ ನಡೆಸಿದವರು ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ನಾಯಕರೂ, ಪೊಲೀಸರೂ ಯಾರೂ ಗಮನಿಸಿಲ್ಲವೇ ಎಂಬುದು ಅಚ್ಚರಿಯಾಗಿದೆ.


ತರಕಾರಿ ಮಾರುಕಟ್ಟೆ ಬಂದ್:
ಪ್ರತಿದಿನವೂ ಜನಜಂಗುಳಿಯಿಂದ ಕೂಡುತ್ತಿದ್ದ ತರಕಾರಿ ಮಾರುಕಟ್ಟೆ ಇಂದು ಸಂಪೂರ್ಣ ಬಂದ್ ಆಗಿತ್ತು. ತರಕಾರಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನೀಡಿದ್ದ ಬಂದ್ ಕರೆಗೆ ಸಹಕರಿಸಿದ ವ್ಯಾಪಾರಸ್ಥರು ತಮ್ಮ ವಹಿವಾಟುಗಳನ್ನು ಬಂದ್ ಮಾಡಿದ್ದರು. ಸುತ್ತಮುತ್ತಲ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ ಗಳು ಕೂಡ ಬಾಗಿಲು ಮುಚ್ಚಿದ್ದವು. ಆದರೆ ಹೊರಗಡೆ ಮಾತ್ರ ಕೆಲವು ಸಣ್ಣಪುಟ್ಟ ತರಕಾರಿ ಮಾರಾಟ ಮಾಡುವವರು ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು.
ನಗರದ ಒಳ ಬಡಾವಣೆಗಳಲ್ಲಿ ಬಂದ್‌ನ ಬಿಸಿ ತಟ್ಟಲಿಲ್ಲ. ಅಲ್ಲಿರುವ ಪೆಟ್ಟಿಗೆ ಅಂಗಡಿಗಳು, ಚಿಕ್ಕಪುಟ್ಟ ಹೊಟೇಲ್‌ ಗಳು ಎಂದಿನಂತೆ ತೆರೆದಿದ್ದವು. ಉಳಿದಂತೆ ಆಸ್ಪತ್ರೆ, ಮೆಡಿಕಲ್ ಶಾಪ್‌ಗಳು ತನ್ನ ಕಾರ್ಯನಿರ್ವಹಿಸಿದ್ದವು. ರಸ್ತೆಯಲ್ಲಿ ಜನ ಸಂಚಾರ ಎಂದಿನಂತಿತ್ತು ಒಟ್ಟಾರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.



ಪದಗಂಟು :           
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©