Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಪಿ ಎಫ್‌ ಐ ವಿರುದ್ಧ ಆರೋಪಕ್ಕೆ ಖಂಡನೆ

ದಲಿತರಿಗೆ,ಅಲ್ಪಸಂಖ್ಯಾತರಿಗೆ ಅದರಲ್ಲೂ ದಲಿತ ಮಹಿಳೆಯರಿಗೆ ಇಲ್ಲಿ ಸುರಕ್ಷತೆ ಇಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಬಗ್ಗೆ ಪ್ರಶ್ನೆ ಮಾಡಿದರೆ ಸಂಘಟನೆಯ ವಿರುದ್ದವೇ ಆರೋಪ ಹೊರಿಸುತ್ತದೆ.

2020-10-08 05:30:00, ajeyanews.com

Ajeya Image

ಶಿವಮೊಗ್ಗ, ಅ.8:
ಪಾಪ್ಯುಲರ್ ಫ್ರಂಟ್ ವಿರುದ್ದ ದ್ವೇಷದ ಅಭಿಯಾನವನ್ನು ನಿಲ್ಲಿಸುವಂತೆ ಆಗ್ರಹಿಸಿ ಪಿ ಎಫ್‌ ಐ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಉತ್ತರಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಪಿ ಎಫ್‌ ಐ ಖಂಡಿಸುತ್ತದೆ. ಆದರೆ ಇಲ್ಲಿನ ಯೋಗಿ ಸರ್ಕಾರ ಈ ಹತ್ಯೆ ಪ್ರಕರಣದ ವೈಫಲ್ಯವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಇಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಲಿತರಿಗೆ,ಅಲ್ಪಸಂಖ್ಯಾತರಿಗೆ ಅದರಲ್ಲೂ ದಲಿತ ಮಹಿಳೆಯರಿಗೆ ಇಲ್ಲಿ ಸುರಕ್ಷತೆ ಇಲ್ಲ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ಬಗ್ಗೆ ಪ್ರಶ್ನೆ ಮಾಡಿದರೆ ಸಂಘಟನೆಯ ವಿರುದ್ದವೇ ಆರೋಪ ಹೊರಿಸುತ್ತದೆ. ಯುಪಿ ಪೊಲೀಸರು ಅಲ್ಲಿನ ಅಡ್‌ ಹಾಕ್ ಕಮಿಟಿ ಸದಸ್ಯರನ್ನು ಹಿಂಸಾಚಾರದ ಮಾಸ್ಟರ್ ಮೈಂಡ್‌ ಗಳೆಂದು ಆರೋಪಿಸುತ್ತಾರೆ. ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ. ಲವ್ ಜಿಹಾದ್ ಕಟ್ಟುಕಥೆ ಕಟ್ಟುತ್ತಾರೆ. ಇದು ಖಂಡನೀಯ ಎಂದರು.

ಪಿ ಎಫ್‌ ಐ ಈ ನೆಲದ ಕಾನೂನನ್ನು ಗೌರವಿಸುತ್ತಾ ಪ್ರಜಾಸತ್ತಾತ್ಮಕ ಹೋರಾಟದಲ್ಲಿ ನಂಬಿಕೆ ಇರುವ ಸಂಘಟನೆಯಾಗಿದೆ. ಕಾನೂನಾತ್ಮಕ ಹೋರಾಟವನ್ನು ಮಾತ್ರ ಮಾಡುತ್ತೇವೆ. ಇಂತಹ ಸಂಘಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನು ಅಲ್ಲಿನ ಸರ್ಕಾರ ಮಾಡಬಾರದು ಮತ್ತು ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಅಬ್ದುಲ್‌ರಹಿಂ, ಮನ್ಸೂರ್ ಖಾನ್ ಇದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©