Tuesday 27 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಬಿಜೆಪಿಗೆ ಈಗ ಚಿನ್ನದ ಸಮಯ: ಬಿವೈಆರ್

ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಇದೆ. ಜಿಲ್ಲೆಯ ಅನೇಕರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲೆ ಸಂಪೂರ್ಣ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವ ಅನುಮಾನಗಳು ಇಲ್ಲ. ರಾಜ್ಯವೂ ಇದಕ್ಕೆ ಹೊರತಾಗಿಲ್ಲ.

2020-10-08 05:30:00, ajeyanews.com

Ajeya Imageಶಿವಮೊಗ್ಗ, ಅ.8: 

ಗ್ರಾಮ ಪಂಚಾಯ್ತಿ ನಂತರ ಚುನಾವಣೆಯಿಂದ ಹಿಡಿದು ಎಲ್ಲ ಬಗೆಯ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುತ್ತಿದೆ. ನಮ್ಮ ಪಕ್ಷಕ್ಕೆ ಈಗ ಚಿನ್ನದ ಸಮಯ ಎಂದು ಸಾಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಇಂದು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ನಂತರ ಸಂದರ್ಭದಲ್ಲೂ ಕೂಡ ಪಕ್ಷ ಅನೇಕ ಸಾಮಾಜಿಕ ಬದ್ದತೆ ಪ್ರದರ್ಶಿಸಿದೆ, ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದೆ. ಇಡೀ ದೇಶದಲ್ಲಿ ಹೊಸ ಸಂಚಲನ ಉಂಟಾಗಿದೆ. ಹೊಸ ಕೃಷಿ ಗಾಳಿಯೇ ಬೀಸುತ್ತಿದೆ. ಅಪ್ಪ ಹಾಕಿದ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ತಪ್ಪನ್ನು ನಮ್ಮ ಪಕ್ಷದ ಮುಖಂಡರು ಮಾಡುತ್ತಿಲ್ಲ. ಇಡೀ ದೇಶದಲ್ಲಿ ಅಭಿವೃದ್ದಿಯ ಅಲೆ ಎದ್ದಿದೆ. ಕೋವಿಡ್ -19 ಸಂದರ್ಭದಲ್ಲಿಯೂ ಕೂಡ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ ಎಂದರು.

ಶಿವಮೊಗ್ಗ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಕಂಕಣ ತೊಡಲಾಗಿದೆ. ರೈಲ್ವೆ, ವಿಮಾನ, ಪ್ರವಾಸೋದ್ಯಮ, ಕೈಗಾರಿಕೆ, ಶಿಕ್ಷಣ,ಆರೋಗ್ಯ, ಸಾಮಾಜಿಕ ಬದ್ದತೆ, ಪರಿಸರ ಪ್ರಜ್ಞೆ ಮುಂತಾದ ಎಲ್ಲ ವಿಭಾಗಗಳಲ್ಲಿಯೂ ಜಿಲ್ಲೆ ತನ್ನ ಅಸ್ತಿತ್ವವನ್ನು ಮೆರೆದಿದೆ. ಸುಮಾರು 5 ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುತ್ತದೆ. 100 ಎಕರೆ ಜಾಗದಲ್ಲಿ ಸ್ಪೈಸ್‌ಪಾರ್ಕ್ ನಿರ್ಮಾಣಗೊಂಡಿದೆ. ನೀರಾವರಿ ಯೋಜನೆಗಳು ಸಾಕಾರಗೊಳ್ಳಲಿವೆ. ಶೀಘ್ರವೇ ಶಿವಮೊಗ್ಗದಿಂದ ವಿಮಾನ ಹಾರಾಟ ನಡೆಸಲಿದೆ. ಜೋಗದಲ್ಲಿ ವರ್ಷಕಾಲ ನೀರು ಹರಿಯಲಿದೆ.

-ಬಿ.ವೈ. ರಾಘವೇಂದ್ರ, ಸಾಂಸದ


ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಇದೆ. ಜಿಲ್ಲೆಯ ಅನೇಕರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲೆ ಸಂಪೂರ್ಣ ಕಾಂಗ್ರೆಸ್ ಮುಕ್ತವಾಗುವುದರಲ್ಲಿ ಯಾವ ಅನುಮಾನಗಳು ಇಲ್ಲ. ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ಆದರೆ ವಿರೋಧ ಪಕ್ಷಗಳು ಅಧಿಕಾರವಿಲ್ಲದೇ ಹಪಾಹಪಿತನ ಪ್ರದರ್ಶನ ಮಾಡುತ್ತಿವೆ. ಹೊಸ ಕಾಯ್ದೆಗಳ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಈ ಬಗ್ಗೆ ತಿಳಿಸಿಹೇಳಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕುಮಾರ್ ಬಂಗಾರಪ್ಪ, ಡಿ.ಎಸ್.ಅರುಣ್, ಎಸ್.ದತ್ತಾತ್ರಿ, ಎಸ್.ಎಸ್. ಜ್ಯೋತಿಪ್ರಕಾಶ್, ನಟರಾಜ್, ಗಿರೀಶ್ ಪಟೇಲ್, ಮಧುಸೂದನ್ ಸೇರಿದಂತೆ ಹಲವರಿದ್ದರು. ಪದ್ಮಿನಿ ಸ್ವಾಗತಿಸಿದರು.


ಪದಗಂಟು :           
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©