Wednesday 28 October 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಕೇಂದ್ರ ಸರ್ಕಾರದ ಮೌನ ಖಂಡನೀಯ: ಸುಂದರೇಶ್

ಕೇಂದ್ರ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಸ್ತ್ರೀಯರಿಗೆ ಗೌರವ ಕೊಡುತ್ತೇವೆ ಎಂದು ಹೇಳುವ ಬಿಜೆಪಿ ಪಕ್ಷವೇ ಈ ರೀತಿ ಅನಾಚಾರವಾಗಿ ವರ್ತಿಸುತ್ತಿದೆ

2020-10-08 05:30:00, ajeyanews.com

Ajeya Image

ಶಿವಮೊಗ್ಗ, ಅ.8:
ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಪ್ರಕರಣಗಳು ನಡೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಗಂಭೀರವಾಗಿ ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಗಾಂಧಿಪಾರ್ಕ್ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾಗಿದ್ದ ಉತ್ತರ ಪ್ರದೇಶ ಸರ್ಕಾರದ ದೌರ್ಜನ್ಯ, ದಬ್ಬಾಳಿಕೆ, ಧರ್ಮನೀತಿಯ ವಿರುದ್ದ ಶಾಂತಿಯುತ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.

ಹತ್ರಾಸ್ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಇರುವುದು ನೀಚ ಸರ್ಕಾರವಾಗಿದೆ. ಯುವತಿಯ ಮೇಲಿನ ಅದರಲ್ಲೂ ದಲಿತ ಯುವತಿ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಆ ಸರ್ಕಾರ ಹೋಗಿರುವುದು ತೀರಾ ಖಂಡನೀಯ ಮತ್ತು ಸಂತ್ರಸ್ಥೆಯ ಮನೆಗೆ ತೆರಳುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ತಡೆದಿರುವುದು ಮತ್ತು ತಳ್ಳಾಟ ನಡೆಸಿರುವುದು ಕೂಡ ಖಂಡನೀಯವಾದುದು ಎಂದರು.

ಅತ್ಯಾಚಾರಗಳನ್ನು ತಡೆಯುವಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ. ಸರ್ಕಾರವೇ ಪರೋಕ್ಷವಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿರುವುದು ಪಾಪದ ಕೆಲಸವಾಗಿದೆ. ಕೂಡಲೇ ಉತ್ತರ ಪ್ರದೇಶದ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.Ajeya Image

ಕೇಂದ್ರ ಸರ್ಕಾರ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಇಡೀ ದೇಶದ ಜನರ ನೆಮ್ಮದಿಯನ್ನೇ ಹಾಳು ಮಾಡಿದೆ. ಸ್ತ್ರೀಯರಿಗೆ ಗೌರವ ಕೊಡುತ್ತೇವೆ ಎಂದು ಹೇಳುವ ಬಿಜೆಪಿ ಪಕ್ಷವೇ ಈ ರೀತಿ ಅನಾಚಾರವಾಗಿ ವರ್ತಿಸುತ್ತಿದೆ ಎಂದು ಪಕ್ಷದ ಮುಖಂಡರು ಹತ್ರಾಸ್ ಘಟನೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಮುಖಂಡರಾದ ಕಲಗೋಡು ರತ್ನಾಕರ್, ವೇದ ವಿಜಯ್‌ಕುಮಾರ್, ವೈ.ಹೆಚ್.ನಾಗರಾಜ್, ಡಾ.ಶ್ರೀನಿವಾಸ್, ಹೆಚ್.ಸಿ. ಯೋಗೀಶ್, ಆರ್.ಸಿ.ನಾಯ್ಕ, ವಿಶ್ವನಾಥ್ ಕಾಶಿ, ಸಿ.ಎಸ್. ಚಂದ್ರಭೂಪಾಲ್, ಎಲ್.ರಾಮೇಗೌಡ, ಪಲ್ಲವಿ, ಡಿ.ಸಿ.ನಿರಂಜನ್, ಚಂದನ್, ಯಮುನಾ ರಂಗೇಗೌಡ, ಮೆಹಕ್ ಷರೀಫ್, ಹೆಚ್.ಪಿ. ಗಿರೀಶ್, ಕೆ.ರಂಗನಾಥ್, ಮಧುಸೂದನ್, ಕೆ.ಚೇತನ್ ಇನ್ನಿತರರು ಭಾಗವಹಿಸಿದ್ದರು.

ಕಾಂಗ್ರೆಸ್ ಸೇವಾದಳದ ಹಿರಿಯ ಮುಖಂಡ ಉಮಾಪತಿ ಹಾಗೂ ಪಕ್ಷದ ನಾಯಕರುಗಳ ನಿಧನಕ್ಕೆ ಮೌನಾಚರಣೆ ನಡೆಸಲಾಯಿತು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©