Sunday 13 June 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಸರಳವಾಗಿ ವಿಜಯದಶಮಿ ಆಚರಣೆ

ನಗರದ ರತ್ನಗಿರಿ ಬೋರೆಯ ಕಾಳಿಕಾಂಬ ದೇವಾಲಯದಲ್ಲಿ ವಿಜಯದಶಮಿ ಪೂಜಾ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು ಎಂದು ದೇವಾಲಯ ಸಮಿತಿ ಅಧ್ಯಕ್ಷ ಭೀಶ್ಮಾಚಾರ್ ಹೇಳಿದ್ದಾರೆ.

2020-10-28 05:30:00,

Ajeya Image

ನಗರದ ರತ್ನಗಿರಿ ಬೋರೆಯ ಕಾಳಿಕಾಂಬ ದೇವಾಲಯದಲ್ಲಿ ವಿಜಯದಶಮಿ ಪೂಜಾ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು ಎಂದು ದೇವಾಲಯ ಸಮಿತಿ ಅಧ್ಯಕ್ಷ ಭೀಶ್ಮಾಚಾರ್ ಹೇಳಿದ್ದಾರೆ.

ಸುಮಾರು 900 ವರ್ಷಗಳ ಇತಿಹಾಸವಿರುವ ದೇವಾಲಯಕ್ಕೆ ಐವತ್ತು ವರ್ಷಗಳಿಂದ ಪೂಜಾ ವಿಧಿವಿಧಾನ ಕಾರ್ಯಕ್ರಮಗಳನ್ನು ಸಮಿತಿಯು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

 

ಸಮಿತಿಯ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ ದೇವಾಲಯವು ಈಗಾಗಲೇ ಶಿಥಿಲಗೊಂಡಿದ್ದು ಸರ್ಕಾರ ದೇವಾಲಯದ ಅಭಿವೃದ್ಧಿಗೆ ಮುಂದಾದರೆ ಸಂತಸವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

 ಸಮಿತಿಯ ಉಪಾಧ್ಯಕ್ಷ ಪ್ರಸನ್ನಚಾರ್, ಖಜಾಂಚಿ ದಕ್ಷಿಣಮೂರ್ತಿ, ಸದಸ್ಯರುಗಳಾದ ಗಂಗಾಧರ್, ಅರುಣ್, ಮಂಜು, ಮೂರ್ತಿ ಉಮೇಶ್, ಜಗದೀಶ್ ಇದ್ದರು.

ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©