Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಲಂಚ ಕೇಳಿದ ಪಾಲಿಕೆ ಅಧಿಕಾರಿ ವಿರುದ್ಧ ಏಕಾಂಗಿ ಪ್ರತಿಭಟನೆ

ಪಾಲಿಕೆಯಲ್ಲಿ ಸ್ಯಾನಿಟರಿ ಸೂಪರ್‌ ವೈಸರ್ ಕೆಲಸ ನೀಡಬೇಕು. ಲಂಚ ಬಾಕ ಅಧಿಕಾರಿ ಮದಕರಿ ನಾಯಕ್ ಅವರನ್ನು ಕೂಡಲೆ ಅಮಾನತು ಪಡಿಸಬೇಕೆಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು.

2020-11-11 05:30:00, ajeyanews.com

Ajeya Imageಶಿವಮೊಗ್ಗ, ನ.11:
ಪಾಲಿಕೆಯಲ್ಲಿ ಟ್ರೇಡ್ ಲೈಸೆನ್ಸ್, ಕಟ್ಟಡ ಪರವಾನಿಗೆ, ಜನನ-ಮರಣ ಪ್ರಮಾಣ ಪತ್ರಕ್ಕೂ, ರಾಜಾರೋಷವಾಗಿ ಲಂಚ ತೆಗೆದುಕೊಳ್ಳುವ ಪಾಲಿಕೆಯ ಕೆಲವು ಲಂಚಬಾಕರು ಇದೀಗ ಸ್ಯಾನಿಟರಿ ಸೂಪರ್‌ ವೈಸರ್ ಕೆಲಸಕ್ಕೆ 1 ಲಕ್ಷ ರೂ. ಲಂಚವನ್ನು ಕೇಳುವುದರ ಮೂಲಕ ಪಾಲಿಕೆಯ ಮಾನ ಹರಾಜು ಹಾಕಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. 

ಹೊಸಮನೆಯ ಫಾಲಾಕ್ಷಿ ಎನ್ನುವವರು ಸ್ಯಾನಿಟರಿ ಸೂಪರ್‌ ವೈಸರ್ ಕೆಲಸಕ್ಕೆ ಅರ್ಜಿ ಹಾಕಿದ್ದರು. ಕೆಲಸ ನೀಡಬೇಕಾದರೆ 1 ಲಕ್ಷ ರೂ. ನೀಡಬೇಕು, ನಾನು ಹಲವರಿಗೆ ಕೊಡಬೇಕಾಗಿದೆ. ಈಗ ನಡೆಯುತ್ತಿರುವುದೇ 1 ಲಕ್ಷ ಎಂದು ಪಾಲಿಕೆ ಆರೋಗ್ಯಾಧಿಕಾರಿ ಮದಕರಿ ನಾಯಕ್ ನೇರವಾಗಿ ಪಾಲಾಕ್ಷಿಗೆ ಹೇಳಿದ್ದು, ಇದರಿಂದ ಗಾಬರಿಗೊಂಡ ಅವರು ನಾನು ಕಡು ಬಡವನಾಗಿದ್ದು, ನನ್ನಲ್ಲಿ ಹಣವಿಲ್ಲ ಎಂದಾಗ ಆರೋಗ್ಯಾಧಿಕಾರಿ ರೋಷನ್ ಅವರಿಗೆ ಟೆಂಡರ್ ಆಗಿದೆ ಅವರಲ್ಲಿ ವಿಚಾರಿಸಿ ಎಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರು 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಕೊನೆಗೆ ತನ್ನ ಆರ್ಥಿಕ ಸಂಕಷ್ಟ ತೋಡಿಕೊಂಡು ಮನೆಯಲ್ಲಿನ ಒಡವೆ ಅಡವಿಟ್ಟು 40 ಸಾವಿರ ನೀಡಿದ್ದಾರೆ. ಕೆಲಸದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರಿಂದ ಫಾರಂ ಪಡೆದು ಭರ್ತಿ ಮಾಡಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

 ಇಂದು ಕೆಲಸಕ್ಕೆಂದು ಬಂದಾಗ ನೀನು ಚುನಾವಣೆಗೆ ಸ್ಪರ್ಧಿಸಿದ್ದಿ, ಆದ್ದರಿಂದ ನಿನಗೆ ಕೆಲಸ ನೀಡಲು ಆಗುವುದಿಲ್ಲ ಎಂದು ಸಬೂಬು ಹೇಳಿದ್ದಾರೆ. ಇದರಿಂದ ನೊಂದ ಪಾಲಾಕ್ಷಿ ಇಂದು ಮಹಾನಗರ ಪಾಲಿಕೆಯ ಮುಖ್ಯ ದ್ವಾರದಲ್ಲಿ ಅಂಬೇಡ್ಕರ್ ಭಾವಚಿತ್ರ ಹಿಡಿದುಕೊಂಡು ನನಗೆ ನ್ಯಾಯ ಬೇಕು, ಪಾಲಿಕೆಯಲ್ಲಿ ಸ್ಯಾನಿಟರಿ ಸೂಪರ್‌ ವೈಸರ್ ಕೆಲಸ ನೀಡಬೇಕು. ಲಂಚ ಬಾಕ ಅಧಿಕಾರಿ ಮದಕರಿ ನಾಯಕ್ ಅವರನ್ನು ಕೂಡಲೆ ಅಮಾನತು ಪಡಿಸಬೇಕೆಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು. 

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©