Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ಚಲನಚಿತ್ರ ಪ್ರೇರಣೆ: ಭಿಕ್ಷೆ ಬೇಡಿದ ಯುವಕ!

ಚಿತ್ರದುರ್ಗದಲ್ಲಿರುವ ಹೆತ್ತವರಿಗೆ ಹಸ್ತಾಂತರಿಸಿ ಮಾನವೀಯ ಮೆರೆದಿದ್ದಾರೆ. ಪದವೀಧರ ಯುವಕನು ಕೆಲಸವಿಲ್ಲದೆ ಮನನೊಂದು ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಿದ್ದು ಉಡುಪಿಯಲ್ಲಿ ರಕ್ಷಣೆಗೊಳಗಾದ.

2020-11-17 05:30:00, ajeyanews.com

Ajeya Imageಚಿತ್ರದುರ್ಗ, ನ.17:
ಅಮ್ಮ ಐ ಲವ್ ಯು ಚಲನಚಿತ್ರ ನೋಡಿದ ಮನ ನೊಂದ ಯುವಕ ಚಲನಚಿತ್ರದಲ್ಲಿ 48 ದಿನ ಬೇಡಿ ತಿಂದು ಕಷ್ಟ ಪರಿಹಾರ ಆಗುವುದೆಂದು ಕಥೆ ತಿಳಿದ ಚಿತ್ರದುರ್ಗ ಯುವಕ ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲಿ ಬೇಡುತಿದ್ದ. 

ಇದನ್ನು ಗಮನಿಸಿದ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ತಾರಾನಾಥ್ ಮೇಸ್ತ ಯುವಕನನ್ನು ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ತದನಂತರ ಚಿತ್ರದುರ್ಗದಲ್ಲಿರುವ ಹೆತ್ತವರಿಗೆ ಹಸ್ತಾಂತರಿಸಿ ಮಾನವೀಯ ಮೆರೆದಿದ್ದಾರೆ. ಪದವೀಧರ ಯುವಕನು ಕೆಲಸವಿಲ್ಲದೆ ಮನನೊಂದು ಮನೆ ಬಿಟ್ಟು ಊರಿಂದ ಊರಿಗೆ ಸಂಚರಿಸುತ್ತಿದ್ದು ಉಡುಪಿಯಲ್ಲಿ ರಕ್ಷಣೆಗೊಳಗಾದ. 

ಮಗ ಮನೆ ಬಿಟ್ಟಂದಿನಿಂದ ಹೆತ್ತವರು ಹುಡುಕಾಟದಲ್ಲಿ ನಿರತರಾಗಿದ್ದರು. 

ಮೂಲತಃ ಚಿತ್ರದುರ್ಗದ ಯುವಕ ಮಗನ ಇರುವಿಕೆಯ ಸುದ್ದಿ ತಿಳಿದು ಯುವಕನ ತಂದೆ ಕೂಡಲೇ ಉಡುಪಿಗೆ ಬಂದು ಮಗನನ್ನು ವಶಕ್ಕೆ ಪಡೆದು ಸಂತೋಷದಿಂದ ಊರಿಗೆ ಕರೆದುಕೊಂಡು ಹೋಗಿದ್ದಾರೆ. ಈ ವರ್ಷ ಮಗನಿಲ್ಲದೆ ದೀಪಾವಳಿ ಆಚರಣೆ ಇಲ್ಲ ಎಂದು ಎಣಿಸಿದ್ದೆವು. ಇದೀಗ ದೀಪಾವಳಿಗೆ ಮಗ ಸಿಕ್ಕಿರುವುದು ಸಂತಸ ತಂದಿದೆ. ಮಗನನ್ನು ರಕ್ಷಿಸಿ ಆರೈಕೆ ಮಾಡಿದ ಸಮಾಜ ಸೇವಕರು ನಿಜವಾಗಿ ನಮ್ಮ ಪಾಲಿನ ಆಪತ್ಬಾಂಧವರು. ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿ ಚಿತ್ರದುರ್ಗಕ್ಕೆ ಮಗನನ್ನು ಕರೆದುಕೊಂಡು ಬಂದಿದ್ದಾರೆ.


ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©