Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ನ್ಯಾಯಬೆಲೆ ಅಂಗಡಿಗೆ ಬಂದ ನಾಗರಹಾವು!

ಸುಮಾರು 10 ಅಡಿ ಉದ್ದದ ನಾಗರಹಾವನ್ನು ಹಿಡಿದು ಗೋದಾಮಿನಿಂದ ಹೊರ ತಂದಿದ್ದಾರೆ. ಇಲಿಯನ್ನು ನುಂಗಿದ ನಾಗರಹಾವು ತೆವಳಲು ಸಾಧ್ಯವಾಗದೆ ಇಲಿಯನ್ನು ಹೊರ ಹಾಕಲು ಪರದಾಡಿ ನಿಧಾನಕ್ಕೆ ಇಲಿಯನ್ನು ಹೊರ ಹಾಕಿತು.

2020-11-17 05:30:00, ajeyanews.com

Ajeya Imageಕೊಟ್ಟಿಗೆಹಾರ, ನ.17: 
ಜಾವಳಿಯ ನ್ಯಾಯಬೆಲೆ ಅಂಗಡಿಯ ಗೋದಾಮಿಯಲ್ಲಿ ನಾಗರಹಾವೊಂದು ಕಾಣಸಿಕೊಂಡು ಆತಂಕಕ್ಕೆ ಕಾರಣವಾಯಿತು. 
ಜಾವಳಿ ನ್ಯಾಯಬೆಲೆ ಅಂಗಡಿಗೆ ಬಂದಿದ್ದ ಪಡಿತರವನ್ನು ವಾಹನದಿಂದ ನ್ಯಾಯಬೆಲೆ ಅಂಗಡಿಯ ಗೋದಾಮಿಗೆ ಇಳಿಸುವ ವೇಳೆ ಸಿಬ್ಬಂದಿಯೊಬ್ಬರು ಗೋದಾಮಿನಲ್ಲಿ ಇಲಿಯೊಂದನ್ನು ನುಂಗಿದ್ದ ನಾಗರಹಾವು ಸಿಬ್ಬಂದಿಯ ಕೈಗೆ ಕಚ್ಚುವುದು ಕೂದಲೆಳೆಯಲ್ಲಿ ತಪ್ಪಿದ್ದು ಗಾಬರಿಗೊಂಡು ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಹೊರ ಬಂದಿದ್ದಾರೆ.
ಗೋದಾಮಿನೊಳಗೆ ಹೋಗಲು ಭಯವಾಗಿ ಹೊರಗೆ ನಿಂತ ಸಿಬ್ಬಂದಿ ಕೂಡಲೆ ಬಣಕಲ್‌ನ ಉರಗ ಪ್ರೇಮಿ ಆರೀಫ್ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ನ್ಯಾಯಬೆಲೆ ಅಂಗಡಿಯ ಗೋದಾಮಿನಲ್ಲಿ ಪಡಿತರ ಮೂಟೆಗಳ ನಡುವೆ ಅಡಗಿದ್ದ ಸುಮಾರು 10 ಅಡಿ ಉದ್ದದ ನಾಗರಹಾವನ್ನು ಹಿಡಿದು ಗೋದಾಮಿನಿಂದ ಹೊರ ತಂದಿದ್ದಾರೆ. ಇಲಿಯನ್ನು ನುಂಗಿದ ನಾಗರಹಾವು ತೆವಳಲು ಸಾಧ್ಯವಾಗದೆ ಇಲಿಯನ್ನು ಹೊರ ಹಾಕಲು ಪರದಾಡಿ ನಿಧಾನಕ್ಕೆ ಇಲಿಯನ್ನು ಹೊರ ಹಾಕಿತು.
ನಂತರ ಉಪವಲಯ ಅರಣ್ಯಾಧಿಕಾರಿ ಯಾಸಿನ್ ಅವರ ಸಮ್ಮುಖದಲ್ಲಿ ನಾಗರಹಾವನ್ನು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟರು. 
ಜಾವಳಿ ನ್ಯಾಯಬೆಲೆ ಅಂಗಡಿಯ ಗೋಡೆಗಳು ಕೆಲವೆಡೆ ತೂತು ಬಿದಿದ್ದು ಇಲಿ, ಹಾವುಗಳ ಆವಾಸಸ್ಥಾನವಾಗಿದೆ. ನ್ಯಾಯಬೆಲೆ ಅಂಗಡಿಯ ಗೋದಾಮು ಕಟ್ಟಡವನ್ನು ದುರಸ್ಥಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©