ಶಿವಮೊಗ್ಗ, ನ.19:
ನಗರದ ಹಳೆ ಕಾರಾಗೃಹ ಪಾಳುಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಇದರ ನಿರ್ವಹಣೆಯನ್ನು ಮಹಾನಗರಪಾಲಿಕೆಗೆ ವಹಿಸಬೇಕೆಂದು ಒತ್ತಾಯಿಸಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಇಂದು ಸುತ್ತಲಿನ ಪ್ರದೇಶದ ನಿವಾಸಿಗಳು ಮನವಿ ಸಲ್ಲಿಸಿದರು.
ಮಹಾನಗರಪಾಲಿಕೆ ವಾ.ನಂ.9ರ ಹಳೇ ಜೈಲು ಜಾಗ ಒಟ್ಟು 46 ಎಕರೆಯಲ್ಲಿ 10 ಎಕರೆ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ದಿಯಾಗಿದ್ದು, ಉಳಿದ 36 ಎಕರೆ ಜಾಗ ಪಾಳುಬಿದ್ದು ಅನೈತಿಕ ಚಟವಟಿಕೆಗಳ ತಾಣವಾಗಿದೆ ಎಂದು ದೂರಿದರು.
ಹಾವು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಈ ಜಾಗ ಮಾರ್ಪಟ್ಟಿದೆ. ಸ್ವಚ್ಛತೆ ಇಲ್ಲದೇ ಅವ್ಯವಸ್ಥೆಯಿಂದ ಕೂಡಿದ್ದು ಇದರಿಂದಾಗಿ ರಾಜೇಂದ್ರನಗರ, ನಾಗೇಂದ್ರ ಕಾಲೋನಿ, ವಿನೋಬನಗರ, ಕೀರ್ತಿನಗರ ನಾಗರಿಕರ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಹೇಳಿದರು.
ಮೂರು ತಿಂಗಳಿಗೊಮ್ಮೆ ಈ ಜಾಗವನ್ನು ಸ್ವಚ್ಚಗೊಳಿಸಲು ಆದೇಶಿಸಬೇಕು. ಇಲ್ಲಿರುವ ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳು ಕಳುವಾಗುತ್ತಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. 36 ಎಕರೆ ಸುತ್ತಲೂ ಬಾಕ್ಸ್ ಡ್ರೈನೇಜ್ ನಿರ್ಮಿಸಬೇಕು. ಜಾಗದ ನಿರ್ವಹಣೆಯನ್ನು ಮಹಾನಗರಪಾಲಿಕೆಗೆ ವಹಿಸಬೇಕೆಂದು ಆಗ್ರಹಿಸಿದರು.
ಮಹಾಗನಗರ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ. ರಾಜೇಂದ್ರ ನಗರ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಕೆ.ಜೆ. ಮಿತ್ರ, ಡಾ.ಶ್ರೀಧರ್, ಪಿ.ವಿ.ಪ್ರಭಾಕರ್, ಎಂ.ಎಲ್. ಮುರಳಿ ಮತ್ತಿತರರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©