Wednesday 02 December 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಭೀಮ್ ಸುದ್ದಿ

ಒನ್ ಬೆಸ್ಟ್ ಮೂಮೆಂಟ್ ಟೀಮ್ ಸ್ಪರ್ಧೆ ಆಯೋಜನೆ

ದಾವಣಗೆರೆಯಲ್ಲಿ ಡಿ.13ರಂದು ಅಂತಿಮ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಾಳುಗಳು ಡಿ.3ರೊಳಗೆ ಆನ್‌ಲೈನ್‌ನಲ್ಲಿ ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ

2020-11-19 05:30:00, ajeyanews.com

Ajeya Imageಶಿವಮೊಗ್ಗ, ನ.19:
ಬಾಲಕಿಯರ ಹಾಗೂ ಮಹಿಳೆಯರಲ್ಲಿರುವ ಕೌಶಲ್ಯಗಳನ್ನು ಹೊರತೆಗೆಯುವ ಉದ್ದೇಶದಿಂದ ಒನ್ ಬೆಸ್ಟ್ ಮೂಮೆಂಟ್ ಈವೆಂಟ್ಸ್ ಸಂಸ್ಥೆಯಿಂದ ಒನ್ ಬೆಸ್ಟ್ ಮೂಮೆಂಟ್ ಟೀಮ್-2020 ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಸಿ. ಮೇಘ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 4 ರಿಂದ 61 ವರ್ಷ ವಯೋಮಾನದವರೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸ್ಪರ್ಧಾಳುಗಳು ತಮ್ಮಲ್ಲಿರುವ ಕೌಶಲ್ಯವನ್ನು ಪ್ರದರ್ಶಿಸಬಹುದಾಗಿದೆ.4 ರಿಂದ 7 ಹಾಗೂ 8 ರಿಂದ 12 ಮತ್ತು 13 ರಿಂದ 16 ವರ್ಷ ವಯೋಮಾನದವರು, ಮಕ್ಕಳ ವಿಭಾಗದಲ್ಲಿ ಪಾಲ್ಗೊಳ್ಳಬಹುದಾಗಿದ್ದು, 18 ರಿಂದ 30 ವರ್ಷ ವಯೋಮಾನದವರು ಮಿಸಸ್ ವಿಭಾಗದಲ್ಲಿ ಹಾಗೂ 20 ರಿಂದ 40, 41 ರಿಂದ 60, 61ಕ್ಕೂ ಮೇಲ್ಪಟ್ಟವರು ಮಿಸ್ಟರ್ ವಿಭಾಗದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು. 

ದಾವಣಗೆರೆಯಲ್ಲಿ ಡಿ.13ರಂದು ಅಂತಿಮ ಸ್ಪರ್ಧೆ ನಡೆಯಲಿದ್ದು, ಸ್ಪರ್ಧಾಳುಗಳು ಡಿ.3ರೊಳಗೆ ಆನ್‌ಲೈನ್‌ನಲ್ಲಿ ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದ ಅವರು, ಮಹಿಳೆಯರಲ್ಲಿರುವ ಪೇಂಟಿಂಗ್, ಕುಕ್ಕಿಂಗ್, ವರ್ಕ್ ಡಿಸೈನ್ ಇನ್ನು ಮುಂತಾದ ಕೌಶಲ್ಯಗಳನ್ನು ಇದರಲ್ಲಿ ಪ್ರದರ್ಶಿಸಬಹುದಾಗಿದೆ. ಅಲ್ಲದೆ, ನಡಿಗೆ ಶೈಲಿಯನ್ನು ಕೂಡಾ ಸ್ಪರ್ಧಾಳುಗಳಿಗೆ ನೀಡಲಾಗುತ್ತದೆ ಎಂದು ಹೇಳಿದರು. 

ಗೆದ್ದಂತಹ ಸ್ಪರ್ಧಾಳುಗಳಿಗೆ 10 ಸಾವಿರ ರೂ. ಹಾಗೂ 5 ಸಾವಿರ ರೂ. ಬಹುಮಾನಗಳನ್ನು ಎಲ್ಲಾ ವಿಭಾಗಗಳಲ್ಲಿ ನೀಡಲಾಗುವುದು ಎಂದ ಅವರು, ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಆಸಕ್ತರು (ಮೊ:8310420490, 9739748550)ಗೆ ಸಂಪರ್ಕಿಸಬಹುದಾಗಿದೆ ಎಂದರು. 

ಕಾರ್ಯಕ್ರಮದ ಸಂಯೋಜಕ ಪಂಚಾಕ್ಷರಿ ಉಪಸ್ಥಿತರಿದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©