ಶಿವಮೊಗ್ಗ, ನ.19:
ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನೋತ್ಸವದ ಅಂಗವಾಗಿ ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಠದ ಮುಂಭಾಗ ಕೂರುವ ಬಡ ವಯೋವೃದ್ದರಿಗೆ ಸೀರೆ ಹಾಗೂ ಹೊದಿಕೆ ವಿತರಣೆ ಮಾಡಲಾಯಿತು.
ಜಿಲ್ಲಾ ಯುವ ಕಾಂಗ್ರೆಸ್ನ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್, ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ನಗರಾಧ್ಯಕ್ಷ ಹೆಚ್.ಪಿ. ಗಿರೀಶ್, ರಾಜ್ಯ ಕಾರ್ಯದರ್ಶಿ ಆರ್.ಕಿರಣ್, ಕುಮರೇಶ್, ಪುಷ್ಪ ಕುಮಾರ್, ಪದಾಧಿಕಾರಿಗಳಾದ ರಾಕೇಶ್, ಪವನ್,ಗಗನ್ , ಪುರುಷೋತ್ತಮ್, ಆಕರ್ಷ ವಾಲ್ಮೀಕಿ, ಪಕ್ಷದ ಮುಖಂಡರಾದ ಸಿದ್ದಪ್ಪ, ಮಹೇಂದ್ರ ಜೈನ್ ಇತರರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©