Wednesday 02 December 2020  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಸುಮಾರ್ ಸುದ್ದಿ

ದೇಶಾದ್ರಿ ಹೊಸ್ಮನೆಗೆ ಪಿತೃ ವಿಯೋಗ

2020-11-19 05:30:00, ajeyanews.com

Ajeya Imageಶಿವಮೊಗ್ಗ, ನ.19:
ಪತ್ರಕರ್ತ (ಸಿನಿಲಹರಿ) ದೇಶಾದ್ರಿ ಹೊಸ್ಮನೆ ಅವರ ತಂದೆ ಕರಿಯಪ್ಪಹೊಸ್ಮನೆ (72) ಅವರು ಇಂದು ಮುಂಜಾನೆ ಸೊರಬದ ತತ್ತೂರುವಡ್ಡಿಗೆರೆ ಗ್ರಾಮದಲ್ಲಿ ವಿಧಿವಶರಾಗಿದ್ದಾರೆ.

ಕರಿಯಪ್ಪ ಅವರು ಖ್ಯಾತ ಪತ್ರಕರ್ತ ದೇಶಾದ್ರಿ ಹೊಸ್ಮನೆ ಸೇರಿದಂತೆ ಇಬ್ಬರು ಗಂಡು , ಮೂವರು ಹೆಣ್ಣುಮಕ್ಕಳು,ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

ಕರಿಯಪ್ಪ ಅವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತೀವ್ರ ಸಂತಾಪ ಸೂಚಿಸಿದೆ.

ಮೃತರ ಆತ್ಮಕ್ಕೆ ಚಿರಶಾಂತಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲೆಂದು ಸಂಘದ ಅಧ್ಯಕ್ಷರಾದ ಕೆ.ವಿ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ರಾಜ್ಯ ಸಮಿತಿ ನಿರ್ದೇಶಕ ಎನ್.ರವಿಕುಮಾರ್ ಪ್ರಾರ್ಥಿಸಿದ್ದಾರೆ.

ಪದಗಂಟು :   
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©