Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಭದ್ರಾ ಎಡನಾಲೆಗೆ ನೀರು ಬಿಡಿ: ಮನವಿ

2000ನೇ ಇಸವಿಗಿಂತ ಮುಂಚೆ ಈ ಪ್ರದೇಶದಲ್ಲಿ ನವೆಂಬರ್ 25ಕ್ಕೆ ನೀರು ನಿಲ್ಲಿಸಿ, ಡಿಸೆಂಬರ್ 25ಕ್ಕೆ ನೀರು ಬಿಡುವ ಪದ್ಧತಿ ಇತ್ತು. ನಾಲೆಗಳ ದುರಸ್ಥಿ ಮತ್ತು ಆಧುನೀಕರಣ ಕಾಮಗಾರಿಗಳಿಂದ ಈ ಪದ್ಧತಿ ವ್ಯತ್ಯಾಸವಾಗಿದೆ.

2020-12-25 05:30:00, ajeyanews.com

Ajeya Imageಶಿವಮೊಗ್ಗ, ಡಿ.25:
ಭದ್ರಾ ಜಲಾಶಯದ ನೀರಿನ ಮಟ್ಟ ಶೇ. 178.10ಗಳಷ್ಟು ಇದ್ದು, 63 ಟಿಎಂಸಿ ನೀರು ಇರುತ್ತದೆ. ಈಗಾಗಲೇ ನೀರನ್ನು ನಿಲ್ಲಿಸಿ, 35 ದಿವಸ ಕಳೆದಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಒಣಗಲಾರಂಭಿಸಿದ್ದು, ಕೂಡಲೇ ಭದ್ರಾ ಎಡನಾಲೆಗೆ ನೀರು ಹರಿಸುವಂತೆ ಭದ್ರಾ ಎಡನಾಲಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಾಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಕೃಷಿ ಇಲಾಖೆ ತಜ್ಞರ ಪ್ರಕಾರ ಹಾಗೂ ರೈತರ ಅನುಭವದ ಪ್ರಕಾರ ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಭತ್ತ ಸಸಿ ಮಾಡಲು ಇದು ಸೂಕ್ತ ಕಾಲವಾಗಿದ್ದು, 20 ದಿವಸಕ್ಕೆ ಒಂದು ಬಾರಿ ನೀರಿನ ಅವಶ್ಯಕತೆ ಯಿರುತ್ತದೆ. 2000ನೇ ಇಸವಿಗಿಂತ ಮುಂಚೆ ಈ ಪ್ರದೇಶದಲ್ಲಿ ನವೆಂಬರ್ 25ಕ್ಕೆ ನೀರು ನಿಲ್ಲಿಸಿ, ಡಿಸೆಂಬರ್ 25ಕ್ಕೆ ನೀರು ಬಿಡುವ ಪದ್ಧತಿ ಇತ್ತು. ನಾಲೆಗಳ ದುರಸ್ಥಿ ಮತ್ತು ಆಧುನೀಕರಣ ಕಾಮಗಾರಿಗಳಿಂದ ಈ ಪದ್ಧತಿ ವ್ಯತ್ಯಾಸವಾಗಿದ್ದು, ಪ್ರಸ್ತುತ ಈ ಕಾಮಗಾರಿ ಪೂರ್ಣಗೊಂಡಿದ್ದು, ಬೇಸಿಗೆ ಹಂಗಾಮಿಗೆ 130 ದಿನಗಳಿಗೆ ಸಾಕಾಗುವಷ್ಟು ನೀರು ಭದ್ರಾ ಡ್ಯಾಂನಲ್ಲಿದ್ದು, ತಕ್ಷಣ ಭದ್ರಾ ಎಡ ನಾಲೆಗೆ ನೀರು ಬಿಡಲು ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ.

 ಈ ಸಂದರ್ಭದಲ್ಲಿ ಸಮಿತಿಯ ವೈ.ಜಿ.ಮಲ್ಲಿಕಾರ್ಜುನ್, ಕೆ.ಜಿ.ಶ್ರೀಧರ್, ಜೆ. ರಘುನಾಥ್, ವಿ.ದಿನಕರ್, ವಿ.ಡಿಸೋಜಾ, ಎನ್. ಹೊನ್ನಪ್ಪ ಮೊದಲಾದವರು ಇದ್ದರು. 

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©