Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಹಿಂದೂ ಯುವಕನಿಗೆ ಹಲ್ಲೆ: ಆಕ್ರೋಶ

ಶಿವಮೊಗ್ಗ ಪಟ್ಟಣದಲ್ಲಿ ಈಚೆಗೆ ಬಜರಂಗದಳ ಕಾರ‍್ಯಕರ್ತ ನಾಗೇಶ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ರಾಜ್ಯದಾದ್ಯಂತ ಅಂತಹ ಘಟನೆ ಹೆಚ್ಚಿವೆ ಅದಕ್ಕಾಗಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.

2021-01-05 05:30:00, ajeyanews.com

Ajeya Imageಶಿಕಾರಿಪುರ. ಜ.5:
ಪಟ್ಟಣದಲ್ಲಿ ಈಚೆಗೆ ಹಿಂದೂ ಯುವಕನನ್ನು ಅನ್ಯ ಕೋಮಿನ ಯುವಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುವುದು ಖಂಡನೀಯ ಅಂತಹ ಘಟನೆ ನಡೆಸಿದವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಎಂ.ಎಸ್.ಪ್ರಕಾಶ್ ಹೇಳಿದರು.

ವಿವಿಧ ಹಿಂದೂಪರ ಸಂಘಟನೆ ವತಿಯಿಂದ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. 

ಶಿವಮೊಗ್ಗ ಪಟ್ಟಣದಲ್ಲಿ ಈಚೆಗೆ ಬಜರಂಗದಳ ಕಾರ‍್ಯಕರ್ತ ನಾಗೇಶ್ ಎಂಬುವರ ಮೇಲೆ ಹಲ್ಲೆ ನಡೆದಿತ್ತು. ರಾಜ್ಯದಾದ್ಯಂತ ಅಂತಹ ಘಟನೆ ಹೆಚ್ಚಿವೆ ಅದಕ್ಕಾಗಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಆಶ್ರಯ ಬಡಾವಣೆಯಲ್ಲಿ ಗಾಂಜಾ, ಅಫೀಮು, ಓಸಿ, ವೇಶ್ಯಾವಾಟಿಕೆ, ಲವ್‌ ಜಿಹಾದ್ ಅವ್ಯಾಹತವಾಗಿ ನಡೆಯುತ್ತಿದೆ. ಅದನ್ನು ತಡೆಯುವ ಪ್ರಯತ್ನ ನಡೆಸಿದ್ದ ಯುವಕನ ಹಲ್ಲೆಗೆ ಕಾರಣವಾಗಿದೆ. ಪೊಲೀಸರು ಈಗಲೆ ತಡೆಯದಿದ್ದರೆ ಮುಂದೆ ಇಂತಹ ಘಟನೆ ಹೆಚ್ಚು ನಡೆಯುವಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಮುಖಂಡರಾದ ಭವರ್‌ಸಿಂಗ್, ಎಂ.ಎಸ್.ರಮೇಶ್, ಹಿಂದೂ ಜನಜಾಗೃತಿ ಸಮಿತಿ ಪರಶುರಾಮ್, ಸುರೇಶ್ ಆಚಾರ್, ಸಂತೋಷ್ ಮತ್ತಿತರರು ಇದ್ದರು.

ಪದಗಂಟು :      
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©