Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಜ.7: ಮಾಜಿ ಶಾಸಕ ಕರಿಯಣ್ಣ ಸ್ಮರಣಾರ್ಥ ಆನವೇರಿಯಲ್ಲಿ ಆರೋಗ್ಯ ಶಿಬಿರ

ಹೃದಯ, ಮೂಳೆ, ನರರೋಗ, ಕಣ್ಣು, ಕಿವಿ, ಮೂಗು, ಗಂಟಲು, ದಂತ, ಸ್ತ್ರೀರೋಗ, ಯುರೋಲಜಿ ಕಿಡ್ನಿ ಸಂಬಂಧಿ ಕಾಯಿಲೆಗಳಿಗೆ ತಪಾಸಣೆ ಚಿಕಿತ್ಸೆ ಲಭ್ಯವಿದೆ ಎಂದು ಡಾ. ಶ್ರೀನಿವಾಸ್ ಕರಿಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಮಹ್ಮದ್ ಷಾಬುದ್ದೀನ್ ಮಾಹಿತಿ

2021-01-05 05:30:00, ajeyanews.com

Ajeya Imageಶಿವಮೊಗ್ಗ, ಜ.5:
ಮಾಜಿ ಶಾಸಕ ದಿ. ಕರಿಯಣ್ಣನವರ 2ನೇ ವರ್ಷದ ಸ್ಮರಣಾರ್ಥ ಜ.7ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಆನವೇರಿ ಗ್ರಾಮದ ಜವಳಿ ನಂದ್ಯಪ್ಪನವರ ಕಾಂಪೌಂಡಿನಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶ್ರೀನಿವಾಸ್ ಕರಿಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಮಹ್ಮದ್ ಷಾಬುದ್ದೀನ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕೆಜಿಪಿ ಆಸ್ಪತ್ರೆ ಹಾಗೂ ಐ ದೃಷ್ಟಿ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಉಚಿತ ಔಷಧಿ ವಿತರಣೆ ಹಾಗೂ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದರು.

ಶಿಬಿರದಲ್ಲಿ ಹೃದಯ, ಮೂಳೆ, ನರರೋಗ, ಕಣ್ಣು, ಕಿವಿ, ಮೂಗು, ಗಂಟಲು, ದಂತ, ಸ್ತ್ರೀರೋಗ, ಯುರೋಲಜಿ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ತಪಾಸಣಾ ಹಾಗೂ ಚಿಕಿತ್ಸೆ ಲಭ್ಯವಿದೆ. ಇಸಿಜಿ, ಎಕೋ, ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು ಎಂದರು.

ಡಾ.ವರದರಾಜ್ ಕರಿಯಣ್ಣ, ಡಾ. ಗೀತಾ ವರದರಾಜ್ ಕರಿಯಣ್ಣ, ಡಾ.ಚಂದ್ರಕಲಾ ಕರಿಯಣ್ಣ, ಡಾ.ಚಂದ್ರಕುಮಾರ್, ಡಾ.ವಿನುತ್ ಕೆ.ಮೂರ್ತಿ, ಡಾ.ಸುಪ್ರಿತ್ ಕೆ.ಮೂರ್ತಿ, ಡಾ.ಅಪೂರ್ವ ಶ್ರೀನಿವಾಸ್ ಕರಿಯಣ್ಣ,ಡಾ.ಶಶಿಕಲಾ ಕರಿಯಣ್ಣ, ಡಾ.ಉದಯಕುಮಾರ್, ಡಾ.ಎಸ್.ಎಲ್.ಮೋಹನ್ ಕುಮಾರ್, ಡಾ.ದರ್ಶನ್, ಡಾ.ಪೂರಣ್, ಡಾ.ವೈಶಾಖ, ಡಾ.ಮೋನಿಷಾ, ಡಾ.ಮಂಜುನಾಥ್, ಡಾ.ಮೇದಿನಿ ಸೇರಿದಂತೆ ಇನ್ನಿತರ ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ ಎಂದರು.

ಸಮಸ್ತ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಹೆಚ್ಚಿನ ಮಾಹಿತಿಗಾಗಿ (ಮೊ.ಸಂ.8073782354, 9535153991, 8073285243)ರನ್ನು ಸಂಪರ್ಕಿಸಬಹುದಾಗಿದೆ ಎಂದರು.

ಬಳಗದ ಉಪಾಧ್ಯಕ್ಷ ಇರ್ಫಾನ್, ಡಾ.ದರ್ಶನ್, ಡಾ.ನಿಖಿಲ್, ರಘು, ನಂದೀಶ್, ಮಂಜುನಾಥ್ ಉಪಸ್ಥಿತರಿದ್ದರು.


ಪದಗಂಟು :        
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©