Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಶಿವಮೊಗ್ಗ: ಕೋಟೆ ಠಾಣೆ ಮುಂದೆ ಹಿಂದು ಸಂಘಟನೆಗಳ ಪ್ರತಿಭಟನೆ

ಹಿಂದು ಯುವಕರನ್ನು ಬೆಳಗಿನ ಜಾವವೇ ಕರೆದುಕೊಂಡು ಬಂದು 307 ಕೇಸ್ ಹಾಕಿದ್ದಾರೆ. ಈ 307 ಕೇಸ್ ಏಕೆ ಹಾಕಿದ್ದಾರೆಂದೇ ಅರ್ಥವಾಗುತ್ತಿಲ್ಲ. ಕೇಳಿದರೆ ನಮಗೆ ಮೇಲಿನಿಂದ ಒತ್ತಡ ಇದೆ ಎಂದು ಹೇಳುತ್ತಾರೆ. ಯಾರ ಒತ್ತಡ ಎಂದು ಅರ್ಥವಾಗುತ್ತಿಲ್ಲ

2021-01-06 05:30:00, ajeyanews.com

Ajeya Imageಶಿವಮೊಗ್ಗ, ಜ.6: ಹಿಂದು ಯುವಕರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿ ಕೋಟೆ ಪೊಲೀಸ್ ಠಾಣೆ ಮುಂದೆ ಹಿಂದು ಸಂಘಟನೆಗಳ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ಹಿಂದು ಯುವಕರ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ನಡೆದು ಒಂದು ತಿಂಗಳು ಕಳೆದರೂ ಕೂಡ ಹಲ್ಲೆ ಮಾಡಿದ ಮುಸ್ಲಿಂ ಗೂಂಡಾಗಳನ್ನು ಇನ್ನೂ ಬಂಧಿಸಿಲ್ಲ. ಆದರೆ ಹಲ್ಲೆ ಮಾಡಿದವರನ್ನು ಬಿಟ್ಟು ಯಾರೋ ಮೂವರು ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ಅಮಾಯಕ ಹಿಂದು ಯುವಕರನ್ನೆ ಪೊಲೀಸರು ಬಂಧಿಸಿದ್ದಾರೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಆರೋಪಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಂಧನ ಮಾಡಿರುವುದರ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ ಯಾರು ಹಲ್ಲೆ ಮಾಡಿದ್ದಾರೆ ಅವರನ್ನು ಬಿಟ್ಟು ಹಲ್ಲೆಗೊಳಗಾದ ಹಿಂದು ಯುವಕರನ್ನು ಬಂಧಿಸಿರುವುದು ಅಕ್ಷ್ಯಮ್ಯ ಅಪರಾಧವಾಗಿದೆ ಎಂದು ದೂರಿದ ಅವರು, ನಾಗೇಶ್ ಎಂಬ ಹಿಂದೂ ಯುವಕ ಏನೂ ತಪ್ಪು ಮಾಡಿರಲಿಲ್ಲ. ಆತ ಬಜರಂಗದಳದ ಕಾರ್ಯಕರ್ತ. ಅವರ ಮೇಲೆ ಹಲ್ಲೆ ನಡೆದರೆ ರಕ್ಷಣಾ ಇಲಾಖೆಗೆ ಏನು ಅನ್ನಿಸುವುದೇ ಇಲ್ಲ. ಆದರೆ ಹಿಂದು ಯುವಕರ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಇದು ತಪ್ಪು ಎಂದು ಹಿಂದು ಸಂಘಟನೆಯ ಮುಖಂಡ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು. 

ಪೊಲೀಸ್ ಇಲಾಖೆ ಒಂದು ಕೋಮಿನ ಹಿಂದೆ ಕೆಲಸ ಮಾಡುತ್ತಿದೆ. ಮುಸಲ್ಮಾನ್ ಗೂಂಡಾಗಳನ್ನು ರಕ್ಷಣೆ ಮಾಡುತ್ತಿದೆ. ಹಿಂದು ಯುವಕರ ಮೇಲೆ ಹಲ್ಲೆಯಾಗಿ ಒಂದು ತಿಂಗಳಾದರೂ ದುಷ್ಕರ್ಮಿಗಳನ್ನು ಬಂಧಿಸದ ಪೊಲೀಸ್ ಇಲಾಖೆ ಈಗ ಹಿಂದು ಯುವಕರನ್ನು ಬಂಧಿಸಿರುವುದು ಸರಿಯಲ್ಲ. ತಕ್ಷಣವೇ ಕೇಸು ವಾಪಾಸ್ ಪಡೆದು ಬಂಧಿತ ಹಿಂದು ಯುವಕರನ್ನು ಬಿಡುಗಡೆ ಮಾಡಬೇಕು. ಹಲ್ಲೆ ಮಾಡಿದ ಮುಸ್ಲಿಂ ಯುವಕರನ್ನು ಕೂಡಲೇ ಬಂಧಿಸಬೇಕು.

- ಪ್ರತಿಭಟನಕಾರರು

ಹಿಂದು ಯುವಕರನ್ನು ಬೆಳಗಿನ ಜಾವವೇ ಕರೆದುಕೊಂಡು ಬಂದು 307 ಕೇಸ್ ಹಾಕಿದ್ದಾರೆ. ಈ 307 ಕೇಸ್ ಏಕೆ ಹಾಕಿದ್ದಾರೆಂದೇ ಅರ್ಥವಾಗುತ್ತಿಲ್ಲ. ಕೇಳಿದರೆ ನಮಗೆ ಮೇಲಿನಿಂದ ಒತ್ತಡ ಇದೆ ಎಂದು ಹೇಳುತ್ತಾರೆ. ಯಾರ ಒತ್ತಡ ಎಂದು ಅರ್ಥವಾಗುತ್ತಿಲ್ಲ. ಈ ಘಟನೆಯಲ್ಲಿ ಊರಿನಲ್ಲಿ ಇಲ್ಲದಿದ್ದವರ ಹೆಸರನ್ನು ಕೂಡ ಸೇರಿಸಲಾಗಿದೆ. ಇದರಿಂದ ಬೇಕೆಂದೇ ಕೇಸು ದಾಖಲಿಸಿಕೊಂಡಿದ್ದಾರೆ. ಘಟನೆ ನಡೆದ ದಿನದಂದು ತನ್ನ ತಂಗಿಯ ಮದುವೆಯಲ್ಲಿ ಭಾಗಿಯಾಗಿದ್ದ ಆ ಸಂದರ್ಭದಲ್ಲಿ ಊರಲ್ಲೇ ಇಲ್ಲದ ಯುವಕನನ್ನು ಕೂಡ ಬಂಧಿಸಿ ಕೊಲೆ ಯತ್ನ ಕೇಸನ್ನು ಹಾಕಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನೀಸಿದರು. 

ಪ್ರಮುಖರಾದ ರಾಮು, ಇ.ವಿಶ್ವಾಸ್, ಬಳ್ಳೆಕೆರೆ ಸಂತೋಷ್, ಭವಾನಿ ಶಂಕರ್, ಜ್ಞಾನೇಶ್ವರ್, ಜಗದೀಶ್, ಹಿರಣ್ಣಯ್ಯ, ರಮೇಶ್ ಬಾಬು, ರಾಜು, ದೀನ ದಯಾಳ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಪ್ರಭು, ಜಾದವ್, ನಾಗರಾಜ್, ಸೇರಿದಂತೆ ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಇದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©