Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ವೇದ-ವೇದಿ ಉಳಿಯಬೇಕು: ಡಾ. ವಂಶಿಕೃಷ್ಣ ಘನಪಾಠಿ

ಬೀಗದ ಕೈ ಇಲ್ಲದೆ ಅವಸ್ಥೆ ಪಡುವಂತಹ ಸನ್ನಿವೇಶ ನಿರ್ಮಾಣವಾಗಿದ್ದು, ಅದಕ್ಕೆ ಅಗ್ನಿಹೋತ್ರ ಎಂಬ ಕೀ ಅವಶ್ಯವಾಗಿದೆ. ವೇದದ ಪರಿ ರಕ್ಷಣೆ ಮಾಡಲು ವೇದಿಗಳು ಬೆರಳೆಣಿಕೆಯಷ್ಟು ಸಿಗುತ್ತಿಲ್ಲ

2021-01-11 05:30:00, ajeyanews.com

Ajeya Imageಶಿವಮೊಗ್ಗ, ಜ.11:
ಸಮಾಜ ಮತ್ತು ಧರ್ಮದ ರಕ್ಷಣೆಗಾಗಿ ವೇದ ಮತ್ತು ವೇದಿ ಅಂದರೆ ಅಗ್ನಿಹೋತ್ರಿಯನ್ನು ಉಳಿಸುವ ಪ್ರಯತ್ನ ಆಗಬೇಕಿದೆ ಎಂದು ಖ್ಯಾತ ವಿದ್ವಾಂಸ, ಅವಧೂತ ಡಾ. ವಂಶಿಕೃಷ್ಣ ಘನಪಾಠಿ ಹೇಳಿದ್ದಾರೆ.

ಅವರು ಇಂದು ಮತ್ತೂರಿನ ರಾಮಭಜನಮಂದಿರದ ಸಭಾಂಗಣದಲ್ಲಿ ಪ್ರಾಚೇತಸ ಶ್ರೌತವಿದ್ಯಾ ಸಂವರ್ಧಿನೀ ವಿಶ್ವಸ್ತಮಂಡಳಿ, ಬೆಂಗಳೂರು ಹಾಗೂ ಜಾನಕಿರಾಮಾಶ್ರಮ, ಮತ್ತೂರು  ಸಹಯೋಗದಲ್ಲಿ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಧರ್ಮಶಾಸ್ತ್ರ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ವೇದಾಧ್ಯಾಯನ ಮಾಡಿದ ವಿದ್ವಾಂಸರುಗಳಿಗೆ ಅವಕಾಶ ಸಿಗುತ್ತಿಲ್ಲ. ನಾಡಿನ ಎಲ್ಲಾ ದೇವಸ್ಥಾನಗಳಲ್ಲೂ ವರ್ಷಕೊಮ್ಮೆಯಾದರೂ ವೇದ ಪಾರಾಯಣದ ಮತ್ತು ವೇದ, ಯಾಗ, ಯಜ್ಞಗಳ ಬಗ್ಗೆ ತಿಳಿದುಕೊಳ್ಳುವ ಕೆಲಸವಾಗಬೇಕಿದೆ. ಯಜ್ಞಗಳಿಂದ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಸಾಧ್ಯವಾಗಿದೆ. ಇದು ನನ್ನ ಸ್ವಂತ ಅನುಭವ ಕೂಡ. ಬೀಗದ ಕೈ ಇಲ್ಲದೆ ಅವಸ್ಥೆ ಪಡುವಂತಹ ಸನ್ನಿವೇಶ ನಿರ್ಮಾಣವಾಗಿದ್ದು, ಅದಕ್ಕೆ ಅಗ್ನಿಹೋತ್ರ ಎಂಬ ಕೀ  ಅವಶ್ಯವಾಗಿದೆ. ವೇದದ ಪರಿ ರಕ್ಷಣೆ ಮಾಡಲು ವೇದಿಗಳು  ಬೆರಳೆಣಿಕೆಯಷ್ಟು ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಯಾಗದ ಮಹತ್ವದ ಬಗ್ಗೆ ನೂರಾರು ಸಂಶೋಧನೆಗಳಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ವೈಜ್ಞಾನಿಕವಾಗಿ ಯಾಗದ ಧನಾತ್ಮಕ ಅಂಶಗಳು ಋಜುವಾತಾಗಿವೆ. ಸರ್ಕಾರದಿಂದ ಅನುದಾನ ಬಂದರೂ, ಬಾರದಿದ್ದರೂ ವೇದಗಳನ್ನು ಉಳಿಸುವ ಕಾರ್ಯವನ್ನು ವೇದಿಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ 
- ಡಾ. ವಂಶಿಕೃಷ್ಣ ಘನಪಾಠಿ

ಪರಿಸರ ಹದಗೆಡುತ್ತಿರುವ ಇಂತಹ ಸಂದರ್ಭದಲ್ಲಿ ಅಗ್ನಿಹೋತ್ರದ ಅವಶ್ಯಕತೆಯಿದೆ. ಶರೀರಕ್ಕಾಗುವ ಕಷ್ಟ, ಸಮಾಜಕ್ಕೆ ಆಗುವ ಹಿಂಸೆ, ಅತಿವೃಷ್ಟಿ-ಅನಾವೃಷ್ಠಿಯಿಂದ ಲಯವಾಗುವಂತಹ ಸನ್ನಿವೇಶಗಳು ಮತ್ತು ಕಾಲಾವಧಿಯಲ್ಲಿ ಬರುವ ಸೋಂಕು ವ್ಯಾದಿಗಳನ್ನು ಕೂಡ ಅಗ್ನಿಹೋತ್ರದಿಂದ ರಕ್ಷಿಸಬಹುದು ಎಂದರು.

ಬ್ರಾಹ್ಮಣರು ನಾವೆಲ್ಲ ಒಂದೇ ಎಂದು ತಿಳಿದಾಗ ಮಾತ್ರ ಇತ್ತೀಚೆಗೆ ಕೇಂದ್ರ ಸರ್ಕಾರ ನೀಡಿದ ಆರ್ಥಿಕ ಮೀಸಲಾತಿಯ ಲಾಭ ಪಡೆಯಬಹುದು. ಬ್ರಾಹ್ಮಣರ ಹಲವು ಪಂಗಡಗಳ ಗೊಂದಲದಿಂದಾಗಿ ಸರ್ಕಾರದ ಅಧಿಕೃತ ಗಣತಿಯ ಪ್ರಕಾರ ಕೇವಲ 17 ಲಕ್ಷ ಬ್ರಾಹ್ಮಣರಿದ್ದಾರೆ. ವಾಸ್ತವವಾಗಿ 47ಲಕ್ಷ ಇದ್ದು, ಸರ್ಕಾರದ ಅಂಕಿ-ಅಂಶಗಳು ತಪ್ಪಿನಿಂದ ಕೂಡಿದೆ . 

- ಸಚ್ಚಿದಾನಂದ ಮೂರ್ತಿ, ಅಧ್ಯಕ್ಷ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ

ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಎಂ.ಬಿ. ಭಾನುಪ್ರಕಾಶ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ಖ್ಯಾತ ಜ್ಯೋತಿಷಿ, ಚಿಂತಕ ಭಾನುಪ್ರಕಾಶ್ ಶರ್ಮಾ, ಸನತ್ ಕುಮಾರ್ ಸೇರಿದಂತೆ ಪ್ರಮುಖ ವಿದ್ವಾಂಸರು ಪಾಲ್ಗೊಂಡಿದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©