Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಲಿಲಿಪುಟ್ ಸುದ್ದಿ

ಬಾಲಕಾರ್ಮಿಕ ವಿರೋಧಿ ಜಾಗೃತಿ

2021-01-11 05:30:00, ajeyanews.com

Ajeya Imageಶಿವಮೊಗ್ಗ : ನಗರದ ಗಾರ್ಡನ್ ಏರಿಯಾದಲ್ಲಿ ಇಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಬಾಲ ಕಾರ್ಮಿಕ ಕಾಯ್ದೆ 1986, ತಿದ್ದುಪಡಿ ಕಾಯ್ದೆ 2019ರ ಕುರಿತು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ನೇಸರ ಕಲಾ ತಂಡದ  ಕಲಾವಿದರಿಂದ ಹಮ್ಮಿಕೊಳ್ಳಲಾಗಿತ್ತು. 
ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ್, ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಯೋಜನಾ ನಿರ್ದೇಶಕ ಎ.ಎಸ್. ರಘುನಾಥ್, ದ್ವಿಚಕ್ರ ವಾಹನ ರಿಪೇರಿ ಸಂಘದ ಅಧ್ಯಕ್ಷ ಸನಾವುಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
ಪದಗಂಟು :    
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©