ಬಸವಣ್ಣನ ಮೂರ್ತಿಯ ಸ್ಥಾಪನೆಯ ಬಗ್ಗೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಪ್ರತಿಪಕ್ಷದವರು ಕೂಡ ಪುತ್ಥಳಿ ಅನಾವರಣಕ್ಕೆ ಪಾಲಿಕೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿರುವುದಾಗಿ ಆರೋಪಿಸಿದ್ದರು. ಇದೀಗ ರಾಜ್ಯದ ವಿವಿಧೆಡೆ ಮಹಾನಗರ ಪಾಲಿಕೆ ಆಡಳಿತದಲ್ಲಿ ಈಗಾಗಲೇ ಬಸವಣ್ಣನ ಪುತ್ಥಳಿ ಸ್ಥಾಪನೆಯಾಗಿದ್ದು, ಇದನ್ನೇ ಮಾದರಿಯಾಗಿಟ್ಟುಕೊಂಡು ಪಾಲಿಕೆ ಸಭೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಯ ನಿರ್ಣಯ ಕೈಗೊಂಡಿದ್ದು, ನಗರದ ಬಸವೇಶ್ವರ ವೃತ್ತದ ಗಾಂಧಿಪಾರ್ಕ್ ಮುಖ್ಯ ದ್ವಾರದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಇಂದು ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ಮೂರ್ತಿ ಪ್ರತಿಷ್ಠಾಪನೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷದನಾಯಕ ಚನ್ನಬಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಭು, ಪಾಲಿಕೆಯ ಸದಸ್ಯ ಜ್ಞಾನೇಶ್ವರ್, ಈ.ವಿಶ್ವಾಸ್ ಅಧಿಕಾರಿಗಳಾದ ಡಂಕಪ್ಪ, ಹರೀಶ್, ಅಕ್ಷತ್ ಮೊದಲಾದವರು ಇದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©