Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಭದ್ರಾವತಿಯಲ್ಲಿ ಅಮಿತ್ ಶಾ ಆಗಮನಕ್ಕೆ ಸರ್ವ ಸಿದ್ಧತೆ

ಕೇಂದ್ರ ಸರ್ಕಾರದ ಕೇಂದ್ರ ಮೀಸಲು ಪಡೆಯ ಅಧೀನದಲ್ಲಿ ಈ ಘಟಕವು ಕಾರ್ಯ ನಿರ್ವಹಿಸಲಿದೆ. ಇದಕ್ಕೆ ರಾಜ್ಯ ಮೀಸಲು ಪಡೆಗೆ ಸೇರಿದ 90 ಎಕರೆ ಜಾಗದಲ್ಲಿ 50 ಎಕರೆ ಜಾಗವನ್ನು ಇದಕ್ಕಾಗಿ ನೀಡಿದ್ದಾರೆ.

2021-01-12 05:30:00, ajeyanews.com

Ajeya Imageಭದ್ರಾವತಿ, ಜ.12:
ಕೇಂದ್ರ ಗೃಹ ಸಚಿವ ಅಮಿತ್ ಷಾ ಆರ್‌ ಎ ಎಫ್ ಘಟಕ ಶಂಕುಸ್ಥಾಪನಾ ಸಮಾರಂಭಕ್ಕೆ ಆಗಮಿಸಲಿದ್ದು ಅದಕ್ಕೆ ಎಲ್ಲಾ ರೀತಿಯ ಸರ್ವ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಇದರ ಜೊತೆಯಲ್ಲಿ ಭದ್ರಾವತಿ ನಗರವನ್ನು ಅಲಂಕರಿಸಲಾಗುತ್ತಿದೆ ಎಂದು ಸಾಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಆರ್‌ ಎ ಎಫ್ ಘಟಕ ಶಂಕುಸ್ಥಾಪನೆ ಸಮಾರಂಭದ ಸ್ಥಳದ ಸಿದ್ದತಾ ಕಾರ್ಯವನ್ನು ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರಗಳನ್ನು ನೀಡಿದರು.

ಕೇಂದ್ರ ಸರ್ಕಾರದ ಕೇಂದ್ರ ಮೀಸಲು ಪಡೆಯ ಅಧೀನದಲ್ಲಿ ಈ ಘಟಕವು ಕಾರ್ಯ ನಿರ್ವಹಿಸಲಿದೆ. ಇದಕ್ಕೆ ರಾಜ್ಯ ಮೀಸಲು ಪಡೆಗೆ ಸೇರಿದ 90 ಎಕರೆ ಜಾಗದಲ್ಲಿ 50 ಎಕರೆ ಜಾಗವನ್ನು ಇದಕ್ಕಾಗಿ ನೀಡಿದ್ದಾರೆ.  ಕರ್ನಾಟಕದ 30 ಜಿಲ್ಲೆಗಳು, ಕೇರಳದ (ಕೋಜಿಕೋಡ್, ಕಾಸರ್‌ಗೋಡು, ಕಣ್ಣನೂರು, ವಯನಾಡ್) 4 ಜಿಲ್ಲೆಗಳು, ಗೋವಾದ (ಉತ್ತರ ಮತ್ತು ದಕ್ಷಿಣ ಗೋವಾ),ದ 2 ಜಿಲ್ಲೆ, ಲಕ್ಷದ್ವೀಪದ 1 ಜಿಲ್ಲೆ, ಮತ್ತು ಪುದುಚೇರಿಯ (ಮಾಹೆ) ಜಿಲ್ಲೆಗಳನ್ನು ಒಳಗೊಂಡಂತೆ ಒಟ್ಟು 38 ಜಿಲ್ಲೆಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಇದಕ್ಕೆ 1500 ಕೋಟಿ ರೂ.ಗಳ ಅನುದಾನ ಕೇಂದ್ರ ಸರ್ಕಾರ ನೀಡಲಿದೆ ಎಂದರು.

ಈ  ಘಟಕದಲ್ಲಿ ಒಂದು ಕಮಾಂಡೆಂಟ್, 2 ಡೆಪ್ಯೂಟಿ ಕಮಾಡೆಂಟ್,  6  ಸಹಾಯಕ ಕಮಾಂಡೆಂಟ್, 16 ಇನ್ಸ್‌ಪೆಕ್ಟರ್, 32 ಎಸ್‌ ಐ, 34 ಎ ಎಸ್‌ ಐ, 56 ಹೆಚ್‌ ಸಿ, 264 ಕಾನ್ಸ್‌ಟೇಬಲ್, 34 ಕಾನ್ಸ್‌ಟೇಬಲ್ ಟ್ರೇಡ್ಸ್‌ಮೆನ್, 46 ಮಹಿಳೆಯರು ಸೇರಿದಂತೆ ಒಟ್ಟು 445 ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಇವರುಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಈಗಾಗಲೆ ಕಲ್ಪಿಸಲಾಗಿದೆ.

ಗೃಹ ಸಚಿವ ಅಮಿತ್ ಷಾ ಜ.16ರಂದು ಬೆಳಿಗ್ಗೆ ದೆಹಲಿಯಿಂದ ಹೊರಟು ಬೆಂಗಳೂರು ಮೂಲಕ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ. 12.30ಕ್ಕೆ ಶಂಕುಸ್ಥಾಪನೆಯ ಪೂಜೆ ಕಾರ್ಯಕ್ರಮದ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಭೋಜನ ಸ್ವೀಕರಿಸಿ ನಂತರ ದೆಹಲಿಗೆ ತೆರಳಲಿದ್ದಾರೆ ಎಂದರು. 

ಆರ್‌ ಎ ಎಫ್ ಘಟಕ ಪ್ರಾರಂಭಗೊಳ್ಳುವುದರ ಮೂಲಕ ನಗರದ ಅಭಿವೃದ್ಧಿಗೆ ಸಹಾಯಕವಾಗಲಿದೆ. ಎಂಪಿಎಂ ಕಾರ್ಖಾನೆ ಪ್ರಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಕೆಲ ಕಾನೂನು ತೊಡಕುಗಳು ಇದ್ದು ಇವುಗಳು ನಿವಾರಣೆ ಆದ ನಂತರ ಪ್ರಾರಂಭವಾಗಲಿದೆ. ವಿ ಐ ಎಸ್‌ ಎಲ್ ಕಾರ್ಖಾನೆ ಮಾರ್ಚ್ ತಿಂಗಳ ನಂತರ ಅದರ ಅಭಿವೃಧ್ಧಿಗೆ ನಾಂದಿ ಆಗಲಿದೆ ಎಂದರು

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಎಸ್.ದತ್ತಾತ್ರಿ, ಶಿವರಾಜ್, ಪವಿತ್ರಾ ರಾಮಯ್ಯ, ತಾಲೂಕು ಅಧ್ಯಕ್ಷ ಪ್ರಭಾಕರ್, ಆರ್.ಎಸ್. ಶೋಭಾ, ಕೂಡ್ಲಿಗೆರೆ ಹಾಲೇಶ್, ಮಂಗೋಟೆ ರುದ್ರೇಶ್, ವಿ.ಕದಿರೇಶ್, ಜಿ.ಆನಂದ ಕುಮಾರ್, ಮಂಜುನಾಥ್, ಬಿ.ಜಿ. ರಾಮಲಿಂಗಯ್ಯ, ಜಿ. ಧರ್ಮ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪದಗಂಟು :         
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©