ಜಾವಳ್ಳಿಯ ಅರಬಿಂದೋ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ವಾಸುದೇವಸ್ವಾಮಿ ವಿವೇಕಾನಂದರ ಚಿಂತನೆ ಹಾಗೂ ಆದರ್ಶ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದರು ವೇದಗಳ ಬಗ್ಗೆ ಮಾತ್ರ ಮಾತನಾಡುತ್ತಿರಲಿಲ್ಲ. ವೇದಗಳ ಜೊತೆ ಕುರಾನ್ ಮತ್ತು ಬೈಬಲ್ಗಳ ಬಗ್ಗೆಯೂ ಮಾತನಾಡುತ್ತಿದ್ದರು. ವಿದ್ಯೆ ಎಂಬುದು ಅಗಾಧವಾದದ್ದು, ನಿಜವಾದ ವಿದ್ಯಾಭ್ಯಾಸದ ಗುರಿ ಎಂದರೆ ಜ್ಞಾನವೇ. ವಿದ್ಯೆಯಿಂದ ಕಲಿಯುವುದು ತಪಸ್ಸಾಗಬೇಕೇ ಹೊರತು, ತಪಸ್ಸಿನಿಂದ ವಿದ್ಯೆ ಕಲಿಯೋಕೆ ಆಗದು. ಜ್ಞಾನಿಗಳು ಎಲ್ಲರಲ್ಲೂ ಭಗವಂತನನ್ನು ನೋಡುತ್ತಾರೆ. ನಿಜವಾದ ವಿದ್ಯಾಭ್ಯಾಸವೆಂದರೆ ನೀವು ನಿಮ್ಮನ್ನು ಅರಿಯುವುದು ಎಂಬ ಮಾತನ್ನು ತಿಳಿಸಿದರು.
ರೈಫಲ್ ಶೂಟಿಂಗ್, ಆರ್ಚರಿ, ಹಗ್ಗ ಜಗ್ಗುವುದು, ಮಡಿಕೆ ಹೊಡೆಯುವುದು, ಹೀಗೆ ಅನೇಕ ಕ್ರೀಡೆಗಳಲ್ಲಿ ರೋವರ್ಸ್ ಮತ್ತು ರೇಂಜರ್ಸ್ಗಳು ಭಾಗವಹಿಸಿ ಖುಷಿಪಟ್ಟರು. ಕ್ರೀಡೆಯಲ್ಲಿ ಗೆದ್ದ ರೋವರ್ಸ್ ಮತ್ತು ರೇಂಜರ್ಸ್ಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಜಿಲ್ಲಾ ಮುಖ್ಯ ಆಯುಕ್ತ ಹೆಚ್.ಡಿ. ರಮೇಶ ಶಾಸ್ತ್ರಿ, ಜಿಲ್ಲಾ ಆಯುಕ್ತರು (ಸ್ಕೌ) ಕೆ.ಪಿ.ಬಿಂದು ಕುಮಾರ್, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ, ಸಹಾಯಕ ಜಿಲ್ಲಾ ಕಾರ್ಯದರ್ಶಿ ವೈ.ಆರ್. ವೀರೇಶಪ್ಪ, ರಾಜ್ಯ ಸಹಾಯಕ ಸಂಘಟನಾ ಆಯುಕ್ತರು (ಗೈ) ಭಾರತಿ ಡಾಯಸ್, ಜಿಲ್ಲಾ ತರಬೇತಿ ಆಯುಕ್ತರು (ಗೈ) ಕಾತ್ಯಾಯಿನಿ ಸಿ.ಎಸ್, ಪತ್ರಿಕಾ ಸಂಪರ್ಕಾಧಿಕಾರಿ ಜಿ.ವಿಜಯ ಕುಮಾರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಡಿ.ಎನ್.ನೂರ್ ಅಹ್ಮದ್, ಸ್ಥಳೀಯ ಸಂಸ್ಥೆ ಸಹಾಯಕ ಕಾರ್ಯದರ್ಶಿ ರಾಜೇಶ್.ಎ.ವಿ, ಎಸ್.ಜಿ.ವಿ.ಸುಮಲತಾ.ಕೆ, ಸುಮಾರು ೮೦ಜನ ರೋವರ್ಸ್, ರೇಂಜರ್ಸ್ಗಳು, ರೋವರ್ಸ್ ಲೀಡರ್ಸ್, ರೇಂಜರ್ಸ್ ಲೀಡರ್ಸ್ ಮತ್ತು ಇತರರು ಭಾಗವಹಿಸಿದ್ದರು.
Designed, Developed and Maintained by PRABHAT SERVICES ™  , AJEYA KANNADA DAILY 2019 ©