Saturday 16 January 2021  
ನಮ್ಮನ್ನು ಹಿಂಬಾಲಿಸಿ :
Ajeya Kannada Daily

ಟಾಪ್ ಟೆನ್ ಸುದ್ದಿ

ಎಸ್‌ಪಿ ಶಾಂತರಾಜುರವರಿಗೆ ವಾಣಿಜ್ಯ ಸಂಘದಿಂದ ಅಭಿನಂದನೆ

ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯಸ್ಥೆಯ ಕಾರ್ಯನಿರ್ವಹಣೆಯನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

2021-01-13 05:30:00,

Ajeya Imageಶಿವಮೊಗ್ಗ, ಜ.13:
ಜಿಲ್ಲೆಯ ಪೋಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಐಪಿಎಸ್ ಜಿಲ್ಲೆಗೆ ಆಗಮಿಸಿದ ಕೆಲವೇ ವರ್ಷಗಳಲ್ಲಿ, ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯಸ್ಥೆಯ ಕಾರ್ಯನಿರ್ವಹಣೆಯನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂ ಅವರ ಕಾರ್ಯತತ್ಪರತೆಯನ್ನು ಗುರುತಿಸಿ, 2019ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು, ನಮಗೆಲ್ಲಾ ಅತೀವ ಸಂತಸ ತಂದಿದೆ ಎಂದು ಸನ್ಮಾನಿಸಿದ್ದಾರೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ, ಉಪಾಧ್ಯಕ್ಷರಾದ ಪಿ. ರುದ್ರೇಶ್, ಎಸ್.ಎಸ್. ಉದಯಕುಮಾರ್, ಕಾರ್ಯದರ್ಶಿ ಬಿ. ಗೋಪಿನಾಥ್, ನಿರ್ದೇಶಕರಾದ ಕೆ.ಎಸ್. ಸುಕುಮಾರ್, ಜಿ. ವಿಜಯಕುಮಾರ್ ನಿನ್ನೆ ಸಂಜೆ ಅವರ ಕಚೇರಿಯಲ್ಲಿ ಪುಷ್ಪಗುಚ್ಚ ನೀಡಿ, ಶಾಲುಹೊದಿಸಿ ಸನ್ಮಾನಿಸಿದರು.

ಪದಗಂಟು :       
ಜಾಹಿರಾತು1
ಜಾಹಿರಾತು1

Designed, Developed and Maintained by PRABHAT SERVICES ™  , AJEYA KANNADA DAILY 2019  ©